ವಾಷಿಂಗ್ಟನ್: ಆರೋಪಿಯೊಬ್ಬ ತಾನು ಕೊಲೆ ಮಾಡಿದ ವ್ಯಕ್ತಿಯ ಹೃದಯವನ್ನು ದೇಹದಿಂದ ಹೊರ ತೆಗೆದು ಬೇಯಿಸಿ ಬಡಿಸಿದ ಅತ್ಯಂತ ಹೇಯ ಅಷ್ಟೇ ಭೀಕರವಾದ ಘಟನೆ ಅಮೆರಿಕದ ಓಕ್ಲಹೋಮ ಎಂಬಲ್ಲಿ ನಡೆದಿದೆ. ಮೂರು ಕೊಲೆ ಮಾಡಿ ಸದ್ಯ ಪೊಲೀಸರ ಅತಿಥಿಯಾಗಿರುವ ಲಾರೆನ್ಸ್ ಪೌಲ್ ಎಂಬಾತನೇ ಈ ಅಮಾನಯವೀಯ ಕೃತ್ಯ ಎಸಗಿದ ಪಾಪಿ. ತನ್ನ ಕುಟುಂಬ ಸದಸ್ಯರಿಗೆ ಮೆಟ್ಟಿಕೊಂಡಿದ್ದು, ಅದಕ್ಕಾಗಿ ಮನುಷ್ಯನರ ಹೃದಯವನ್ನು ಬೇಯಿಸಿ ಕೊಡಬೇಕು ಎಂದು ಯಾರೋ ಹೇಳಿದ್ದನ್ನು ನಂಬಿ ಈ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಲಾರೆನ್ಸ್ ತನ್ನ ನೆರೆ ಮನೆಯ ವ್ಯಕ್ತಿಯನ್ನು ಇರಿದು ಕೊಲೆ ಮಾಡಿದ್ದಾನೆ. ಬಳಿಕ ಆತನ ದೇಹವನ್ನು ಬಗೆದು ಹೃದಯವನ್ನು ಹೊರಗೆ ತೆಗೆದಿದ್ದಾನೆ ಎಂದು ಓಕ್ಲಹೋಮದ ನ್ಯೂಸ್ 4 ಟಿವಿ ವರದಿ ಮಾಡಿದೆ. ಬಳಿಕ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತಂದು, ಅಲ್ಲಿ ಅಲೂಗಡ್ಡೆ ಹಾಕಿ ಬೇಯಿಸಿದ್ದಾನೆ. ಬಳಿಕ ಅದನ್ನು ಚಿಕ್ಕಪ್ಪ ಹಾಗೂ ಚಿಕ್ಕಮ್ಮನಿಗೆ ತಿನ್ನಿಸಿದ್ದಾನೆ. ಇದಾದ ಬಳಿಕ ಚಿಕ್ಕಪ್ಪ ಹಾಗೂ ಮನೆಯಲ್ಲಿದ್ದ ಚಿಕ್ಕಪ್ಪನ 4 ವರ್ಷದ ಮೊಮ್ಮಗಳನ್ನೂ ಹತ್ಯೆ ಮಾಡಿದ್ದಾನೆ. ಚಿಕ್ಕಮ್ಮನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಸುದೈವವಶಾತ್ ಚಿಕ್ಕಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಪ್ಪ ಹಾಗೂ ಚಿಕ್ಕಮ್ಮನಿಗೆ ದೆವ್ವ ಮೆಟ್ಟಿಕೊಂಡಿದ್ದು, ದೆವ್ವ ಬಿಡಿಸಲು ಈ ರೀತಿ ಮನುಷ್ಯನ ಹೃದಯವನ್ನು ಬೇಯಿಸಿ ಕೊಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಫೆಬ್ರವರಿ 9 ರಂದು ನಡೆದಿದೆ. ಈ ಹಿಂದೆಯೂ ಇತನ ಮೇಲೆ ದುಷ್ಕೃತ್ಯ ಎಸಗಿದ ಆರೋಪಗಳಿದ್ದು, 2017 ರಲ್ಲಿ ಡ್ರಗ್ಸ್ ಪ್ರಕರಣವೊಂದರಲ್ಲಿ 20 ವರ್ಷ ಜೈಲು ಶಿಕ್ಷೆಗೆ ತುತ್ತಾಗಿದ್ದ. ಬಳಿಕ ಓಕ್ಲಾಹೋಮ ರಾಜ್ಯಪಾಲ ಆತನಿಗೆ ಕ್ಷಮಾಪಣೆ ನೀಡಿದ್ದರು.
from India & World News in Kannada | VK Polls https://ift.tt/3pRjWoN