ಆರ್ಥಿಕ ಬಿಕ್ಕಟ್ಟಿನ ನಡುವೆ ಅನಗತ್ಯ ಖರ್ಚು: ಸಚಿವರು,ಸಂಸದರಿಗೆ 60 ವಾಹನ ಖರೀದಿಗೆ ಸರಕಾರ ಒಪ್ಪಿಗೆ!

ಬೆಂಗಳೂರು: ಕೊರೊನಾ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಹಾಗೂ ಸಂಸದರ ಬಳಕೆಗೆ ಹೊಸ ಕಾರು ಖರೀದಿಸುವ ಪ್ರಸ್ತಾವಕ್ಕೆ ರಾಜ್ಯ ಸರಕಾರ ಸಮ್ಮತಿ ನೀಡಿದೆ. ಸಚಿವರ ಸಂಪುಟದ 32 ಸದಸ್ಯರು ಹಾಗೂ ರಾಜ್ಯದ 28 ಸಂಸದರ ಬಳಕೆಗಾಗಿ ಒಟ್ಟು 60 ಕಾರುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಪ್ರತಿ ಕಾರಿಗೆ 23 ಲಕ್ಷ ರೂ. ವೆಚ್ಚ ಮಾಡಲು ಒಪ್ಪಿಗೆ ನೀಡಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 13.80 ಕೋಟಿ ರೂ. ಹೊರೆಯಾಗಲಿದೆ. ಕೊರೊನಾ ಪರಿಸ್ಥಿತಿಯ ಬಳಿಕ ರಾಜ್ಯ ಸರಕಾರ ಆರ್ಥಿಕ ಮಿತವ್ಯಯದ ನಿಯಮ ಹೇರಿದೆ. ಅತ್ಯಂತ ತುರ್ತು ಹೊರತು ಪಡಿಸಿ ಇತರ ಉದ್ದೇಶಕ್ಕೆ ಹಣಕಾಸಿನ ನೆರವು ದೊರೆಯುತ್ತಿಲ್ಲ. ಕೆಲವೊಂದು ಸಂದರ್ಭದಲ್ಲಿ ಶಾಲೆಗಳಿಗೆ ವೇತನಾನುದಾನ ಬಿಡುಗಡೆಯೂ ವಿಳಂಬದ ಹಿನ್ನೆಲೆಯಲ್ಲಿ, ಶಿಕ್ಷಕರ ಸಂಬಳ ಬಿಡುಗಡೆಯೂ ತಡವಾಗಿದೆ ಎಂಬ ಆರೋಪವೂ ಇದೆ. ಇದರ ನಡುವೆ ಸರಕಾರದ ಇಂತಹ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಪ್ರಸ್ತಾವನೆ ಪರಿಷ್ಕರಣೆ! ಕಾರು ಖರೀದಿಗೆ ಈ ಮೊದಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಅದರಂತೆ 21 ಲಕ್ಷ ರೂ.ಗೆ ಖರೀದಿಸಲು ಉದ್ದೇಶಿಸಲಾಗಿತ್ತು. ಬಳಿಕ ಇದನ್ನು ಪರಿಷ್ಕರಿಸಿ 22 ಲಕ್ಷ ರೂ.ಗೆ ಏರಿಸಲಾಗಿತ್ತು. ಇದೀಗ ಪುನಃ ಪರಿಷ್ಕರಿಸಿ ಪ್ರತಿ ಕಾರಿಗೆ 23 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಇರುವ ಇನೋವಾಕ್ಕೆ ನೋ..!ಸಚಿವರಿಗೆ ಈಗಾಗಲೇ ಇನೋವಾ ಕಾರು ನೀಡಲಾಗಿದೆ. ಈ ವಾಹನಗಳು ತುಂಬ ಹಳೆಯವೇನೂ ಅಲ್ಲ. ಕಳೆದ ಸರಕಾರದ ಅವಧಿಯಲ್ಲಿಖರೀದಿ ಮಾಡಲಾಗಿದ್ದ ವಾಹನಗಳನ್ನು ಸಚಿವರು, ಸಂಸದರ ಬಳಕೆಗೆ ಮೀಸಲಿಡಲಾಗಿದೆ. ಅದನ್ನು ಇನ್ನಷ್ಟು ಕಾಲ ಉಪಯೋಗಿಸಲು ಯಾವ ತೊಂದರೆಯೂ ಇಲ್ಲ. ಈ ನಡುವೆಯೂ ಹೊಸ ಕಾರು ಕೊಳ್ಳಲು ಮುಂದಾಗಿದ್ದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕೊರೊನಾ ಕಾರಣದಿಂದ ತಲೆದೋರಿರುವ ಆರ್ಥಿಕ ಸಂಕಷ್ಟ ಇನ್ನೂ ನಿವಾರಣೆಯಾಗಿಲ್ಲ. ತೆರಿಗೆ ಸಂಗ್ರಹದ ಗುರಿ ತಲುಪುವುದೂ ಕಷ್ಟವಾಗುತ್ತಿದೆ. ಇದರಿಂದಾಗಿ ಈ ಬಾರಿಯ ಬಜೆಟ್‌ ಗಾತ್ರವೂ ಕಡಿಮೆಯಾಗುವ ಸಾಧ್ಯತೆಯಿದೆ. ಹಳೆಯ ಯೋಜನೆಗಳಿಗೆ ಹಣ ಹೊಂದಿಸುವುದು ಪ್ರಯಾಸಕರವಾಗುತ್ತಿದೆ. ಹೊಸ ಯೋಜನೆಗಳಿಗೆ ಅನುದಾನ ನೀಡುವುದಂತೂ ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಚಿವರು, ಸಂಸದರಿಗೆ ಹೊಸ ಕಾರು ಬೇಕಾ ಎಂಬ ಪ್ರಶ್ನೆ ಎದುರಾಗಿದೆ. ಕಾರಿನ ವಿವರ!* 32 ಸಚಿವರು, 28 ಸಂಸದರಿಗೆ ಹೊಸ ಕಾರು * 1 ಕಾರಿಗೆ 23 ಲಕ್ಷ ರೂ. ವೆಚ್ಚ * ಬೊಕ್ಕಸಕ್ಕೆ 13.80 ಕೋಟಿ ರೂ. ಹೊರೆ ==========================


from India & World News in Kannada | VK Polls https://ift.tt/37KSyT8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...