ಬೀಡಾಡಿ ದನ ಹೊಟ್ಟೆಯಲ್ಲಿತ್ತು 71 ಕೇಜಿಯಷ್ಟು ಪ್ಲಾಸ್ಟಿಕ್‌, ಸೂಜಿ, ನಾಣ್ಯ ಗಾಜಿನ ಚೂರುಗಳು!

ಗುರುಗ್ರಾಮ: ಅಪಘಾತಕ್ಕೀಡಾಗ ಹಸುವೊಂದರ ಶಸ್ತ್ರಚಿಕಿತ್ಸೆ ವೇಳೆ ಅದರ ದೇಹದಿಂದ ಬರೋಬ್ಬರಿ 71 ಕೇಜಿಯಷ್ಟು ತೂಗುವ , ಸೂಜಿ, ನಾಣ್ಯ, ಸ್ಕ್ರೂ, ಪಿನ್‌ ಹಾಗೂ ಗಾಜಿನ ಚೂರು ಹಾಗೂ ಇನ್ನಿತರ ಕೊಳೆತುಹೋಗದ ವಸ್ತುಗಳನ್ನು ಹೊರ ತೆಗೆಯಲಾಗಿದೆ. ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಬೀಡಾಡಿ ದನವಾಗಿದ್ದ ಇದಕ್ಕೆ ಫರೀದಾಬಾದ್‌ನಲ್ಲಿ ಕಾರೊಂದು ಗುದ್ದಿದ್ದರಿಂದ ಗಾಯಾಳಾಗಿ ಬಿದ್ದಿತ್ತು. ಹಸುವನ್ನು ರಕ್ಷಣೆ ಮಾಡಿ ದೇವಶ್ರೇ ಪ್ರಾಣಿಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತನ್ನ ಹೊಟ್ಟೆಯನ್ನು ಕಾಲಿನಿಂದ ಒದಿಯುತ್ತಿರುವುದನ್ನು ಗಮನಿಸಿದ ಪಶು ವೈದ್ಯರು, ಎಕ್ಸ್‌ರೇ ಹಾಗೂ ಅಲ್ಟ್ರಾಸೌಂಡ್‌ ಮೂಲಕ ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಹಸುವಿನ ಹೊಟ್ಟೆಯಲ್ಲಿ ಹಾನಿಕಾರಕ ಪದಾರ್ಥಗಳಿರುವು ಗೊತ್ತಾಗಿದೆ. ಹೀಗಾಗಿ ಹಸುವಿಗೆ ಸರ್ಜರಿ ಮಾಡಲಾಗಿದ್ದು, ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್‌ ಹಾಗೂ ಇನ್ನಿತರ ಕಬ್ಬಿಣದ ವಸ್ತುಗಳನ್ನು ಹೊರತೆಗೆಯಲಾಗಿದೆ. ಭಾರೀ ಪ್ರಮಾಣದ ಪ್ಲಾಸ್ಟಿಕ್‌ ಹಾಗೂ ಕಬ್ಬಿಣದ ವಸ್ತುಗಳು ಸೇರಿಕೊಂಡಿದ್ದರಿಂದ ಹಸು ನೋವು ಅನುಭವಿಸುತ್ತಿತ್ತು. ಹಾಗಾಗಿ ಕಾಲಿನಿಂದ ಹೊಟ್ಟೆಗೆ ಒದಿಯತ್ತಿತ್ತು ಸರ್ಜರಿ ಮಾಡಿದ ವೈದ್ಯರು ಹೇಳಿದ್ದಾರೆ. ಈ ವರೆಗೆ ಹಲವು ದನಗಳ ಹೊಟ್ಟೆಯಿಂದ ಪ್ಲಾಸ್ಟಿಕ್‌ಗಳನ್ನು ತೆಗೆಯಲಾಗಿದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ತೆಗೆದಿರುವುದು ಇದೇ ಮೊದಲು. ಇದು ಎಚ್ಚರಿಕೆಯ ಕರೆಗಂಟೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ರಸ್ತೆಗಳಲ್ಲಿ ಕಸ ಬಿಸಾಡುವುರಿಂದ ಆದ ಪರಿಣಾಮ ಇದು. ರಸ್ತೆ ಬದಿಯಲ್ಲಿ ಬಿದ್ದಿರುವ ಕಸಗಳಿಗೆ ಈ ಪ್ರಾಣಿಗಳು ಬಾಯಿ ಹಾಕುತ್ತವೆ. ಆ ಮೂಲಕ ಪ್ಲಾಸ್ಟಿಕ್‌, ಸೂಜಿ, ಗಾಜು, ನಾಣ್ಯ ಮುಂತಾದ ಹಾನಿಕಾರಕ ವಸ್ತುಗಳು ಪ್ರಾಣಿಗಳ ದೇಹ ಸೇರುತ್ತಿವೆ. ನಮ್ಮ ಬೇಜವಾಬ್ದಾರಿಯಿಂದಾಗಿ ಮೂಕ ಪ್ರಾಣಿಗಳು ವೇದನೆ ಅನುಭವಿಸುತ್ತಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಗಾರರೊಬ್ಬರು ಹೇಳಿದ್ದಾರೆ. ಅಲ್ಲದೇ ಹರ್ಯಾದಲ್ಲಿ 2011ರಿಂದಲೇ ಪ್ಲಾಸ್ಟಿಕ್‌ ತಯಾರಿಕೆ ಹಾಗೂ ಮಾರಾಟಕ್ಕೆ ನಿರ್ಬಂಧ ಇದೆ. ಇಂಥ ರಾಜ್ಯದಲ್ಲೇ ಈ ಪರಿಸ್ಥಿತಿಯಾದರೇ ಉಳಿದ ರಾಜ್ಯಗಳ ಅವಸ್ಥೆ ಏನು ಎನ್ನುವುದರ ಬಗ್ಗೆ ಕಳವಳ ಉಂಟಾಗಿದೆ.


from India & World News in Kannada | VK Polls https://ift.tt/37HHXYX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...