ಶಂಕರ್‌ ಬಿದರಿ ಇ ಮೇಲ್‌ ಐಡಿ ಹ್ಯಾಕ್..! ₹25 ಸಾವಿರ ವರ್ಗಾವಣೆ ಮಾಡಿಸಿ ಪಂಗನಾಮ ಹಾಕಿದ ವಂಚಕರು..!

ಬೆಂಗಳೂರು: ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ್‌ ಬಿದರಿ ಅವರ ಇ- ಮೇಲ್‌ ಐಡಿ ಹ್ಯಾಕ್‌ ಮಾಡಿದ ಅಪರಿಚಿತ ವ್ಯಕ್ತಿಗಳು, ಬಿದರಿ ಅವರ ಸ್ನೇಹಿತರೊಬ್ಬರಿಂದ 25 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿರುವ , ‘ನನ್ನ ಇ-ಮೇಲ್‌ ಐಡಿಯನ್ನು ಅಪರಿಚಿತರು ಹ್ಯಾಕ್‌ ಮಾಡಿ, ಇ ಮೇಲ್‌ ಅಡ್ರೆಸ್‌ನಲ್ಲಿದ್ದ ಸ್ನೇಹಿತರಿಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅಕೌಂಟ್‌ ಮತ್ತು ಐಎಫ್‌ಎಸ್‌ಸಿ ಕೋಡ್‌ ಕಳುಹಿಸಿದ್ದಾರೆ. ನಂತರ ಖಾತೆಗೆ ಹಣ ಜಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ನಾನೇ ಇ- ಮೇಲ್‌ ಕಳುಹಿಸಿರಬಹುದು ಎಂದು ನಂಬಿದ ನನ್ನ ಸ್ನೇಹಿತರೊಬ್ಬರು 25 ಸಾವಿರ ರೂ. ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಬಿದರಿ ತಿಳಿಸಿದ್ದಾರೆ. ಇ- ಮೇಲ್‌ ಐಡಿ ಹ್ಯಾಕ್‌ ಮಾಡಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ. ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಶಂಕರ್ ಬಿದರಿ, ‘ನನ್ನ ಇ- ಮೇಲ್‌ ಐಡಿ ಹ್ಯಾಕ್‌ ಮಾಡಿರುವ ಆರೋಪಿಗಳನ್ನು ಪೊಲೀಸರು ಹಿಡಿಯುತ್ತಾರೆ’ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3sDyWbJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...