ಈರುಳ್ಳಿ, ಪೆಟ್ರೋಲ್, ಗ್ಯಾಸ್‌ ಬೆನ್ನಲ್ಲೇ ಇದೀಗ ಹಾಲಿನ ದರ ಏರಿಕೆ ಬಿಸಿ: ಲೀಟರ್‌ಗೆ ₹12 ಏರಿಕೆ ಸಂಭವ

ಹೊಸ ದಿಲ್ಲಿ: , , ಈರುಳ್ಳಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌ ಕಾದಿದೆ. ಮಾರ್ಚ್‌ ಒಂದರಿಂದ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದ್ದು ಲೀಟರ್‌ ಹಾಲಿಗೆ ಸುಮಾರು ಹನ್ನೆರಡು ರುಪಾಯಿ ಏರಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚದಲ್ಲಿ ಭಾರೀ ಹೆಚ್ಚಳವಾಗಿದ್ದು, ಹೀಗಾಗಿ ಪ್ರತೀ ಲೀಟರ್‌ ಹಾಲಿಗೆ ₹12 ಏರಿಕೆ ಮಾಡಲು ಮಧ್ಯಪ್ರದೇಶ ನಗರವೊಂದರಲ್ಲಿ ವ್ಯಾಪಾರಿಗಳು ತೀರ್ಮಾನ ಮಾಡಿದ್ದಾರೆ. ಮಧ್ಯಪ್ರದೇಶದ ರಾಟ್ಲಮ್‌ ನಗರದಲ್ಲಿ ಸುಮಾರು 25 ಗ್ರಾಮದ ಹಾಗೂ ತರ್ಕಾರಿ ಉತ್ಪಾದಕರು ಈ ಬಗ್ಗೆ ಸಭೆ ನಡೆಸಿದ್ದು, ಮಾರ್ಚ್‌ ಒಂದರಿಂದ ಅನ್ವಯವಾಗುವಂತೆ ಲೀಟರ್‌ ಹಾಲಿನ ದರ ₹55 ನಿಗದಿ ಪಡಿಸಲು ತೀರ್ಮಾನಿಸಲಾಗಿದೆ. ಸದ್ಯ ಅಲ್ಲಿ ಲೀಟರ್‌ ಹಾಲಿಗೆ ₹43 ಇದ್ದು, ದರ ಏರಿಕೆಯಾದರೆ ₹55 ಆಗಲಿದೆ. ಇದು ದೇಶಾದ್ಯಂತ ವಿಸ್ತರಣೆಯಾದರೆ, ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಕಳೆದ ವರ್ಷವೂ ಹಾಲಿನ ಮಾಡಬೇಕು ಎಂದು ನಾವು ವಿನಂತಿಸಿದ್ದೆವು. ಆದರೆ ಕೊರೊನಾದಿಂದಾಗಿ ಬೆಲೆ ಏರಿಕೆ ಮಾಡಿಲ್ಲ. ಆದರೆ ಇದೀಗ, ಪೆಟ್ರೋಲ್‌ ಹಾಗೂ ಡೀಎಲ್ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹಾಲು ಉತ್ಪಾದಕರು ಹೇಳಿದ್ದಾರೆ. ಅಲ್ಲದೇ ನಾವು ಒಂದು ಎಮ್ಮೆಯನ್ನು 1-1.5 ಲಕ್ಷ ರು. ನೀಡಿ ಖರೀದಿ ಮಾಡುತ್ತೇವೆ. ಸದ್ಯ ಹಾಲಿನ ದರ ಲೀಟರ್‌ಗೆ ₹43 ಇದೆ. ಅದನ್ನು ₹55ಕ್ಕೆ ಏರಿಕೆ ಮಾಡಲು ನಿರ್ಧರಿಸಿದ್ದೇವೆ. ಹಾಲು ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಏನಾದರೂ ಬದಲಾವಣೆ ಮಾಡಬೇಕಿದ್ದರೆ ಮುಂದೆ ತೀರ್ಮಾನಿಸುತ್ತೇವೆ ಎಂದು ಅವರು ಹೇಳಿದ್ದಾರೆ.


from India & World News in Kannada | VK Polls https://ift.tt/3qReeo9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...