ಪ್ರೀತಿಸಿದ ಹುಡುಗಿಗೆ‌ ಬೇರೆ ಯುವಕನೊಂದಿಗೆ ಮದುವೆಗೆ ಸಿದ್ಧತೆ; ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ!

ಮೂಡಿಗೆರೆ: ಹಲವಾರು ವರ್ಷಗಳಿಂದ ಪ್ರೀತಿಸಿದ ಹುಡುಗಿಗೆ ಆಕೆಯ ಮನೆಯವರು ಬೇರೆ ಯುವಕನ ಜೊತೆ ಮದುವೆಗೆ ಸಿದ್ದತೆ ನಡೆಸಿದ ಹಿನ್ನಲೆಯಲ್ಲಿ ಮನನೊಂದ ಪ್ರಿಯಕರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ನಲ್ಲಿ ನಡೆದಿದೆ. ಬಣಕಲ್ ನಿವಾಸಿ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿ. ಇವರು 6 ವರ್ಷಗಳಿಂದ ತನ್ನದೇ ಊರಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರು ಮದುವೆಯಾಗಲು ಸಹ ತೀರ್ಮಾನಿಸಿದ್ದರು. ಆದರೆ ಈ ವಿಷಯ ಯುವತಿಯ ಮನೆಯವರಿಗೆ ತಿಳಿಯುತ್ತಿದ್ದಂತೆಯೆ ಬೇರೆ ಯುವಕನೊಂದಿಗೆ ಮಾಡಲು ನಿರ್ಧರಿಸಿದ್ದಾರೆ. ಈ ವಿಚಾರ ತಿಳಿದು ಮನನೊಂದ ರಾಘವೇಂದ್ರ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ರಾಘವೇಂದ್ರನಿಗೆ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


from India & World News in Kannada | VK Polls https://ift.tt/3pVdsFq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...