‘ಪಕ್ಷದಲ್ಲಿ ನಾಯಕರಿಗೆ ಹಿಂಬಾಲಕರಿದ್ದರೆ, ನನ್ನ ಹಿಂದೆ ಕತ್ತೆಗಳಿದ್ದಾರಾ?’ ತನ್ವೀರ್‌ ಸೇಠ್‌ ಕಿಡಿ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್‌- ಉಪ ಮೇಯರ್‌ ಚುನಾವಣೆ ಸಂಬಂಧ ಮೈತ್ರಿ ಮಾಡಿಕೊಳ್ಳಲು ಹೇಳಿದ್ದೇ ಮಾಜಿ ಮುಖ್ಯಮಂತ್ರಿ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಪಾಲಿಕೆಯಲ್ಲಿ ಮೈತ್ರಿ ಸಂಬಂಧ ಎದ್ದಿರುವ ವಿವಾದ ವಿಚಾರವಾಗಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಳ್ಳಲು ಸಿದ್ದರಾಮಯ್ಯ ಹೇಳಿದ್ದರು. ಗಂಡು ಮಗು ಆಗಿಲ್ಲ ಹೆಣ್ಣು ಮಗು ಆಗಿದೆ ಅಷ್ಟೇ. ಗಂಡು ಮಗು ಆದರೆ ಓಕೆ, ಹೆಣ್ಣು ಮಗು ಬೇಡ ಅಂದರೆ ನಾನು ಒಪ್ಪುವುದಿಲ್ಲ ಎಂದು ಹೇಳಿದರು. ಈ ಸಂಬಂಧ ಸೋಮವಾರ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ವರದಿ ನೀಡುವೆ. ನನಗೆ ಪಕ್ಷದ ಋಣವಿದೆ, ವ್ಯಕ್ತಿಗಳ ವರ್ಚಸ್ಸು ವಿಚಾರ ಬಂದಾಗ ಎಲ್ಲರಿಗೂ ಗೌರವ, ವರ್ಚಸ್ಸು ಇದೆ. ನನಗೂ ನನ್ನದೇ ಆದ ಗೌರವ ಇದೆ. ನಮ್ಮ ಕುಟುಂಬದ ವರ್ಚಸ್ಸು ಇದೆ. ಬೇರೆಯವರ ವರ್ಚಸ್ಸನ್ನು ನಾನು ನೋಡುವುದಿಲ್ಲ ಎಂದು ಹೇಳಿದರು. ಪಕ್ಷದಲ್ಲಿ ನಾಯಕರಿಗೆ ಹಿಂಬಾಲಕರಿದ್ದರೆ, ನನ್ನ ಹಿಂದೆ ಕತ್ತೆಗಳಿದ್ದಾರಾ? ನನಗೂ ಹಿಂಬಾಲಕರಿದ್ದಾರೆ ಎಂದು ಹೇಳಿರುವ ಸೇಠ್, ಆದರೆ ನಾನೇನು ಯಾರನ್ನು ಪ್ರತಿಭಟನೆ ಮಾಡಿ ಅಂತ ಕರೆದಿಲ್ಲ. ಪುಡಿಗಾಸಿಗೆ ಬರ್ತಾರೆ ಅಂದರೆ ಏನರ್ಥ. ಹಿಂಬಾಲಕರೇನು ಮಾರಾಟಕ್ಕಿದ್ದಾರಾ? ನಿನ್ನೆಯ ಘಟನೆ ಬಗ್ಗೆ ನನಗೂ ಬೇಸರ ಇದೆ. ಆದರೆ, ನಾನು ಯಾರನ್ನು ಕರೆಸಿ ಪ್ರತಿಭಟನೆ ಮಾಡಿಸಿಲ್ಲ. ಪಕ್ಷ ಯಾವ ಕ್ರಮ ಕೈಗೊಳ್ಳುತ್ತದೆ ಕೈಗೊಳ್ಳಲಿ ಎಂದು ತಿಳಿಸಿದರು. ಮೇಯರ್‌ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಟ್ಟ ವಿಚಾರದಲ್ಲಿ ತಮ್ಮನ್ನು ಅಮಾನತು ಮಾಡಲು ಒತ್ತಾಯ ಸಂಬಂಧ ಪ್ರತಿಕ್ರಿಯಿಸಿದ ಅವರು ನಾನು ಯಾವುದಕ್ಕೂ ಹೆದರುವುದಿಲ್ಲ. ಅಮಾನತು ಮಾಡಿದರೂ ಸಿದ್ಧವಾಗಿದ್ದೇನೆ. ನಿನ್ನೆ ಮಾಜಿ ಮೇಯರ್‌, ಪಾಲಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸಿದ ವಿಚಾರವನ್ನು ಪಕ್ಷದ ಗಮನಕ್ಕೆ ತರುತ್ತೇನೆ. ನನ್ನ ವಿರುದ್ಧ ಕ್ರಮ ಕೈಗೊಂಡರೆ ಅದನ್ನು ಸ್ವೀಕರಿಸುತ್ತೇನೆ. ಪಕ್ಷದ ಬೆಳವಣಿಗೆಯ ಬಗ್ಗೆ ಪಕ್ಷದಲ್ಲೇ ಮಾತನಾಡುವೆ. ನನ್ನ ವಿಚಾರದಲ್ಲಿ ನಾನೇ ಬೇರೆಯಾಗಿ ಹೋರಾಡುವೆ ಎಂದರು. ಇನ್ನು ಹಲವು ದಿನಗಳಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಡೀಲ್‌ ಆಗಿದೆ ಅನ್ನೋದು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.


from India & World News in Kannada | VK Polls https://ift.tt/37Qx2w7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...