ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಚಲಿಸುವ ರೈಲಿನ ಮುಂದೆ ಬಿಸಾಡಿದ ಪಾಗಲ್‌ ಪ್ರೇಮಿ

ಮುಂಬೈ: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ 21 ವರ್ಷದ ಯುವತಿಯನ್ನು ಪ್ರಿಯಕರನೊಬ್ಬ ಚಲಿಸುವ ರೈಲಿನ ಮುಂದೆ ನೂಕಿ ಹಾಕಿ, ಕೊಲೆ ಮಾಡಲು ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಖಾರ್‌ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ಶುಕ್ರವಾರ ನಡೆದಿದೆ. ಮದುವೆಯಾಗಲು ನಿರಾಕರಿಸಿದ್ದಾಳೆ ಎನ್ನುವ ಕಾರಣಕ್ಕೆ ಸುಮುಖ್‌ ಜಾಧವ್‌ ಎಂಬ ಪಾಗಲ್‌ ಪ್ರೇಮಿ ಆಗಮಿಸುತ್ತಿರುವಾಗ ಆಕೆಯನ್ನು ಟ್ರ್ಯಾಕ್‌ಗೆ ತಳ್ಳಿದ್ದಾನೆ. ಸುದೈವವಶಾತ್‌ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತಲೆಗೆ ತೀವ್ರ ಗಾಯ ಉಂಟಾಗಿದ್ದು 12 ಹೊಲಿಗೆಗಳಲ್ಲಿ ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ತಕ್ಷಣ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದು, 12 ಗಂಟೆಯೊಳಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈತ ಮುಂಬೈನ ವಡಾಲ ನಿವಾಸಿ ಎನ್ನುವುದು ಪೊಲೀಸರು ನೀಡಿದ ಮಾಹಿತಿ. ಯುವತಿ ಹಾಗೂ ಆರೋಪಿ ಕಳೆದ ಎರಡು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ನಡುವೆ ಅವರ ನಡುವೆ ಉತ್ತಮ ಸ್ನೇಹ ಕೂಡ ಬೆಳೆದಿತ್ತು. ಆದರೆ ಇತ್ತೀಚೆಗೆ ಆರೋಪಿ ಕುಡಿತದ ದಾಸನಾಗಿದ್ದಾನೆ ಎಂದು ತಿಳಿದ ಬಳಿಕ ಯುವತಿ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಇದಾದ ಬಳಿಕ ಯುವತಿಯನ್ನು ಹಿಂಬಾಲಿಸುವುದು, ಆಕೆಗೆ ತೊಂದೆ ನೀಡುವುದು ಮಾಡುತ್ತಿದ್ದ. ಇದರ ವಿರುದ್ಧ ಯುವತಿ ಪೊಲೀಸು ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರ ಯುವತಿ ಅಂಧೇರಿಯಿಂದ ಖಾರ್‌ಗೆ ರೈಲಿನಲ್ಲಿ ಬಂದಿದ್ದು, ಈ ವೇಳೆ ಆರೋಪಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಅಲ್ಲಿ ತನ್ನನ್ನು ಮದುವೆಯಾಗಬೇಕು ಎಂದು ದುಂಬಾಲು ಬಿದ್ದಿದ್ದಾನೆ. ಆದರೆ ಯುವತಿ ಅದನ್ನು ನಿರಾಕರಿಸಿದ್ದಾಳೆ. ಇದಾದ ಬಳಿಕ ತಾನೇ ಸಾಯುವುದಾಗಿ ಬೆದರಿಕೆ ಹಾಕಿದ್ದ. ಇದಕ್ಕೆ ಯುವತಿ ಸೊಪ್ಪು ಹಾಕದೇ ಇದ್ದಾಗ, ಆಕೆಯನ್ನು ಎಳೆದುಕೊಂಡು ಬಂಚ ಚಲಿಸುವ ರೈಲಿನ ಮುಂದೆ ನೂಕಿದ್ದಾನೆ. ಆತನ ಕೃತ್ಯಗಳು ನಿಲ್ದಾಣದ ಸೀಸಿಟಿವಿಯಲ್ಲಿ ದಾಖಲಾಗಿದೆ.


from India & World News in Kannada | VK Polls https://ift.tt/3kd0dyv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...