ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ, ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್, ಡೀಸೆಲ್‌ ದರ ಏರಿಕೆ ವಿರೋಧಿಸಿ ಆಮ್ ಆದ್ಮಿ ಪಕ್ಷದಿಂದ ಬೆಂಗಳೂರಿನಲ್ಲಿ ಶನಿವಾರ ಸರಣಿ ಪ್ರತಿಭಟನೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಜನಸಾಮಾನ್ಯರ ಕತ್ತನ್ನು ಹಿಸುಕುತ್ತಿದೆ. ನನಗೂ ದೇಶದ, ರಾಜ್ಯದ ಜನರಿಗೂ ಸಂಬಂಧವಿಲ್ಲದಂತೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ದ ಬೆಂಗಳೂರು ನಗರದಾದ್ಯಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ನಗರದ ಪ್ರಮುಖ ಸ್ಥಳಗಳು ಹಾಗೂ 198 ವಾರ್ಡ್ ವ್ಯಾಪ್ತಿಯ ಎಲ್ಲಾ ಪೆಟ್ರೋಲ್ ಬಂಕ್‌ಗಳ ಬಳಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಫೇಸ್‌ಬುಕ್ ಲೈವ್ ಮೂಲಕ ಜನರ ಅಭಿಪ್ರಾಯ ಸಂಗ್ರಹ ಮಾಡಿದರು. ಜಿಎಸ್‌ಟಿ, ನೋಟು ಅಮಾನ್ಯಿಕರಣ, ಕೊರೋನಾದಿಂದ ಜೀವನ ಮೂರಾಬಟ್ಟೆಯಾಗಿದೆ. ಆದರೆ ಪ್ರಧಾನಿ ಮೋದಿಯವರು ಅಂಬಾನ, ಅದಾನಿ ಗೆಳೆಯರ ಜೊತೆ ಸುಖವಾಗಿದ್ದಾರೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಗಡಿ ರಸ್ತೆಯ ಟೋಲ್ ಗೇಟ್, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್, ಅಯೋಧ್ಯ ಹೋಟೆಲ್, ಬಸವೇಶ್ವರ ನಗರದ ಟೋಟಲ್ ಗ್ಯಾಸ್ ಸ್ಟೇಷನ್, ಗಂಗಮ್ಮ ತಿಮ್ಮಯ್ಯ ಕಮ್ಯನಿಟಿ ಹಾಲ್ ಬಂಕ್, ಡಾ.ರಾಜ್‌ಕುಮಾರ್ ರಸ್ತೆಯ ಶ್ರೀರಾಮ ಮಂದಿರ ವಾರ್ಡ್, ಕೆ.ಜಿ.ಹಳ್ಳಿ, ಶಾಂತಿನಗರ, ಆರ್.ಆರ್.ನಗರ, ಮಲ್ಲೇಶ್ವರಂ, ಬಿಟಿಎಂ ಲೇಔಟ್, ಕೋರಮಂಗಲ, ಸರ್ವಜ್ಞ ನಗರ, ಪುಲಕೇಶಿ ನಗರ, ಎಂ.ಜಿ.ರಸ್ತೆ, ಯಲಹಂಕ, ವಿಧಾನಸೌಧ ಸುತ್ತಾಮುತ್ತಾ ಸೇರಿದಂತೆ ಅನೇಕ ಕಡೆ ಪ್ರತಿಭಟನೆ ನಡೆಸಲಾಯಿತು. ಚಾಮರಾಜಪೇಟೆ, ಪಾದರಾಯನಪುರ, ಚಿಕ್ಕಪೇಟೆ ಭಾಗದಲ್ಲಿ ಆಟೋ ಚಾಲಕರು ಪ್ರತಿಭಟನೆಗೆ ಕೈ ಜೋಡಿಸಿದರು. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ವಾರ್ಡ್ ಸೇರಿದಂತೆ ಅನೇಕ ಕಡೆ ನಾಗರೀಕರು ತಮ್ಮ ಮನೆಯ ಮುಂದೆ ಬಿತ್ತಿಫಲಕ ಪ್ರದರ್ಶಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.


from India & World News in Kannada | VK Polls https://ift.tt/37TAC8P

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...