ಸೂರತ್ ಗೆಲುವಿನ ಬಳಿಕ ಕೇಜ್ರಿವಾಲ್‌ಗೆ ಗುಜರಾತ್‌ ವಿಧಾನಸಭೆ ಚುನಾವಣೆಯನ್ನೂ ಗೆಲ್ಲುವ ಗುರಿ

ಸೂರತ್‌: ದಿಲ್ಲಿ ಮುಖ್ಯಮಂತ್ರಿ ನೇತೃತ್ವದ ಆಮ್‌ಆದ್ಮಿ ಪಾರ್ಟಿಯು ಸೂರತ್‌ ನಗರ ಪಾಲಿಕೆಯ ಗೆಲುವನ್ನೇ ಮೆಟ್ಟಿಲಾಗಿಸಿಕೊಂಡು 2022ರಲ್ಲಿ ನಡೆಯುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸುವ ಗುರಿ ಹಾಕಿಕೊಂಡಿದೆ. ಪಾಲಿಕೆಗೆ ಆಯ್ಕೆಯಾಗಿರುವ ಪಕ್ಷದ 27 ಸದಸ್ಯರನ್ನು ಅಭಿನಂದಿಸಿದ ಮಾತನಾಡಿದ ಕೇಜ್ರಿವಾಲ್‌, ''ನಿಮ್ಮ ಸಾಧನೆಯನ್ನೇ ಆಧಾರವಾಗಿಟ್ಟುಕೊಂಡು ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿಪಕ್ಷ ಮತ ಯಾಚಿಸಲಿದೆ. ದಿಲ್ಲಿಯಲ್ಲಿನಾವು ಮೊದಲ ಪ್ರಯತ್ನದಲ್ಲೇ 28 ಸ್ಥಾನ ಗೆದ್ದು ಸರಕಾರ ರಚಿಸಿದೆವು. ಸರಕಾರ ಇದ್ದುದು ಕೇವಲ 49 ದಿನಗಳೇ ಆದರೂ ಜನಪರ ಆಡಳಿತ ನೀಡಿದೆವು, ಹೀಗಾಗಿ ಎರಡನೇ ಬಾರಿ ಜನರು 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಗೆಲ್ಲಿಸಿದರು. ಅಣ್ಣಾ ಹಜಾರೆಯವರ ಆಂದೋಲನದ ಮೂಲಕ ಬಂದಿರುವ ನಾವು ನಿಜವಾದ ದೇಶಭಕ್ತರು ಎನ್ನುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ನೀವು ಚೆನ್ನಾಗಿ ಕೆಲಸ ಮಾಡಿದರೆ 2022ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿಕ್ರಾಂತಿಯಾಗುವುದು ಖಂಡಿತ,'' ಎಂದು ಕೇಜ್ರಿವಾಲ್‌ ಹೇಳಿದರು. ''ಬಿಜೆಪಿ ಸದಸ್ಯರು ನಿಮ್ಮನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸಬಹುದು. ಅಂತಹವರ ಆಮಿಷಗಳಿಗೆ ಮಣಿಯಬೇಡಿ. ನಿಮ್ಮನ್ನು ಬಿಜೆಪಿಯವರು ಸಂಪರ್ಕಿಸಿದರೆ ತಕ್ಷಣವೇ ನಮ್ಮ ಗಮನಕ್ಕೆ ತನ್ನಿ,'' ಎಂದು ದಿಲ್ಲಿಸಿಎಂ ಕಿವಿಮಾತು ಹೇಳಿದರು. ಸೂರತ್‌ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿಬಿಜೆಪಿ 93 ಸ್ಥಾನ ಗಳಿಸಿ ಅಧಿಕಾರ ಉಳಿಸಿಕೊಂಡಿದ್ದರೆ. ಮೊದಲ ಬಾರಿ ಕಣಕ್ಕೆ ಇಳಿದಿದ್ದ ಆಪ್‌ 27 ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್‌ ಇಲ್ಲಿಶೂನ್ಯ ಸಾಧನೆ ಮಾಡಿದೆ.


from India & World News in Kannada | VK Polls https://ift.tt/3swtvuT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...