ಬೆಳಗಾವಿಯಲ್ಲಿ ಕಂದಕಕ್ಕೆ ಕಾರು ಕುಸಿದು ಅಪಘಾತ: ಸ್ಥಳದಲ್ಲಿಯೇ ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಬೆಳಗಾವಿ: ಬೆಡಕಿಹಾಳ -ಭೋಜ ರಸ್ತೆಯಲ್ಲಿ ಕಂದಕಕ್ಕೆ ಕಾರು ಉರುಳಿ ಸಂಭವಿಸಿದ್ದು, ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಬೋರಗಾವ -21. ಬೇಡಕಿಹಾಳ ಬೋಜ ರಸ್ತೆಯಲ್ಲಿಯ ಟಾರೆ ತೋಟದ ಹತ್ತಿರ ತಿರುವಿನಲ್ಲಿ ಶನಿವಾರ ಮಧ್ಯರಾತ್ರಿ ಎರಡು ಗಂಟೆಗೆ ವೆರಿಟೊ ಕಾರು ಕಂದಕಕ್ಕೆ ನುಗ್ಗಿ ಸಂಭವಿಸಿದ ಅಪಘಾತದಲ್ಲಿ ಉಮೇಶ್ ದಿವಾಕರ್ ಮಾನೆ (25) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಹುಲ ಕಾಂಬಳೆ, ಸುನಿಲ ಪಕಾಲೆ ಸುರೇಶ ಕಾಕಣಿಕೆ ಎಂಬುವವರು ಗಾಯಗೊಂಡಿದ್ದು ಚಿಕ್ಕೋಡಿಯ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದಲಗಾ ಪಟ್ಟಣದ ಈ ನಾಲ್ವರು ಯುವಕರು ಶನಿವಾರ ಸಂಜೆ ಮಾಂಜರಿ ದಾಬಾದಲ್ಲಿ ಕುಡಿದು ಊಟ ಮಾಡಿ ಭೋಜ ಗ್ರಾಮಕ್ಕೆ ಬಂದಿದ್ದರು. ಭೋಜದಿಂದ ತಮ್ಮೂರು ಸದಲಗಾ ಕಡೆಗೆ ಸಾಗುತ್ತಿದ್ದಾಗ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸದಲಗಾ ಪೊಲೀಸ್ ಠಾಣೆ ಪಿಎಸ್ಐ ಆರ್ ವಾಯ್ ಬೀಳಗಿ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


from India & World News in Kannada | VK Polls https://ift.tt/3bu7gie

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...