
ಚಿಕ್ಕಮಗಳೂರು: ಏಕಾಏಕಿ 250 ಒಂದೇ ಕಡೆಯಲ್ಲಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾರಣವೇ ಇಲ್ಲದೆ ಇದ್ದಕ್ಕಿದ್ದಂತೆ 250 ಕುರಿಗಳು ಒಂದೇ ಕಡೆಯಲ್ಲಿ ಸಾವನಪ್ಪಿ ಬಿದ್ದಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ. ಕುರಿಗಳು ಸಾವನಪ್ಪುತ್ತಿರುವ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಇನ್ನು 150 ಕುರಿಗಳು ಸಾಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಳೆಯಲ್ಲಿ ಈ ಕುರಿಗಳು ನೆನೆದಿದ್ದವು, ನಿನ್ನೆ ಬೆಳಗ್ಗೆಯಿಂದ ಒಂದೊಂದೆ ಕುರಿಗಳು ಸಾವನಪ್ಪುತ್ತಿದೆ. ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದಾದರೂ ರೋಗದಿಂದ ಸಾವನಪ್ಪಿದ್ಯಾ? ಅಥವಾ ಇಷ್ಟೇಲ್ಲ ಕುರಿಗಳು ಒಂದೇ ಬಾರಿ ಸಾವನಪ್ಪಲು ಕಾರಣವೇನು ಎನ್ನುವುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಕುರಿ ಸಾಕಣೆಕೆಕಾರರು ಕುರಿಗಳನ್ನು ಹೊಡೆದುಕೊಂಡು ಕಡೂರಿನ ಎರೆಹಳ್ಳಿ, ಹುಲ್ಲೇಹಳ್ಳಿ, ಮೇಲೆಹಳ್ಳಿಗೆ ಬಂದಿದ್ದರು. ನಿನ್ನೆ ಸಂಜೆ ಕಡೂರಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕುರಿಗಳು ತೀವ್ರವಾಗಿ ನೆನೆದಿದ್ದವು. ನಿನ್ನೆ ಬೆಳಗ್ಗೆಯಿಂದಲೇ ಆಗಾಗ್ಗೆ ಒಂದು-ಎರಡು, ಮೂರು-ನಾಲ್ಕು ಕುರಿಗಳು ಸಾವನ್ನಪ್ಪಿ ಸಂಜೆ ವೇಳೆಗೆ ಸುಮಾರು 250 ಕುರಿಗಳು ಸಾವನ್ನಪ್ಪಿವೆ.
from India & World News in Kannada | VK Polls https://ift.tt/37HyTn4