ಹೆಚ್.ಡಿ.ಕೋಟೆಯಲ್ಲಿ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಪಿಡಿಓ ಮತ್ತು ಗ್ರಾಪಂ ಸಿಬ್ಬಂದಿ

ಮೈಸೂರು: ಮೈಸೂರಿನಲ್ಲಿ ಎಸಿಬಿ ಅಧಿಕಾರಿಗಳು ಭ್ರಷ್ಟ ಮಿಕಗಳಿಗೆ ಶಾಕ್ ಕೊಟ್ಟಿದ್ದಾರೆ . ನಿವೇಶನದ ಖಾತೆ ಮಾಡಿಕೊಡಲು ಪಡೆಯುತ್ತಿದ್ದ ಹಾಗೂ ದ್ವಿತೀಯ ದರ್ಜೆ ಸಹಾಯಕ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಮೈಸೂರಿನ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಿವೇಶನವೊಂದರ ಖಾತೆ ಬದಲಾವಣೆಗೆ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೇಶರಾಮ್ ಎಂಬುವರು ಎಸಿಬಿಗೆ ದೂರು ನೀಡಿದ್ದರು. ಮೊದಲೇ 10 ಸಾವಿರ ಕೊಟ್ಟಿದ್ದ ಕೇಶರಾಮ್ 20 ಸಾವಿರ ಕೋಡೋದಾಗಿ ಹೇಳಿ ಬಂದಿದ್ರು. ಇದೇ ವಿಚಾರವನ್ನ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ರು . ಶುಕ್ರವಾರ ಬಾಕಿ ಉಳಿದ 20 ಸಾವಿರ ಸ್ವೀಕರಿಸುವಾಗ ಪಿಡಿಓ ಲೋಕೇಶ್ ಹಾಗೂ ಎಸ್ಡಿಎ ವೆಂಕಟೇಶ್ ಸಿಕ್ಕಿಬಿದ್ದಿದ್ದಾರೆ. ದೂರು ದಾಖಲಿಸಿಕೊಂಡ ಮೈಸೂರು ಭ್ರಷ್ಟಾಚಾರ ನಿಗ್ರಹದಳದ ಎಸ್ ಪಿ ಅರುಣಾಂಶಗಿರಿ ಮಾರ್ಗದರ್ಶನದಲ್ಲಿ ಲಂಚಬಾಕರನ್ನು ಹಿಡಿಯಲು ಪ್ಲಾನ್ ಮಾಡಲಾಯಿತು. ಡಿ ಎಸ್ ಪಿ ಪರಶುರಾಮಪ್ಪ, ಪೊಲೀಸ್ ನಿರೀಕ್ಷಕ ಕರೀಂರಾವತರ್ ಮತ್ತು ಕೆ ಎಸ್ ನಿರಂಜನ್ ಹೊಂಚು ಹಾಕಿದ್ದರು. ಗ್ರಾಮ ಪಂಚಾಯ್ತಿ ಪಿಡಿಓ ಲೋಕೇಶ್ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೆಂಕಟೇಶ್ ಅವರು ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಈಗ ಇಬ್ಬರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಈ ಇಬ್ಬರ ಮೇಲೆ ಸಾಕಷ್ಟು ದೂರುಗಳು ಕೇಳಿಬಂದಿದ್ವು . ಆದ್ರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇತ್ತು. ಇದೀಗ ಶುಕ್ರವಾರ ಇಬ್ಬರು ಸಾಕ್ಷಿಸಮೇತ ಸಿಕ್ಕಿಬಿದ್ದಿದ್ದು, ಭ್ರಷ್ಟಾಚಾರಿಗಳು ಎಸಿಬಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ.


from India & World News in Kannada | VK Polls https://ift.tt/3dO9DPW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...