ಕಲ್ಪವೃಕ್ಷದ ನಾಡಿನಲ್ಲಿ ನಾರಿನ ಕೈಗಾರಿಕೆಗಳೇ ಇಲ್ಲ, ಬಳಕೆಯಾಗದೆ ಉಳಿದ 100 ಕೋಟಿ ರೂ. ಸಬ್ಸಿಡಿ!

ಶಶಿಧರ್‌ ಎಸ್‌.ದೋಣಿಹಕ್ಲು ತುಮಕೂರು: ಕಲ್ಪತರು ನಾಡು ಎಂದೇ ಪ್ರಸಿದ್ಧವಾಗಿರುವ ತುಮಕೂರಿನಲ್ಲಿ ಅತಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಆದರೆ, ನಾರಿನ ಕೈಗಾರಿಕೆಗಳಿಗೆ ಮಾತ್ರ ಬೇಡಿಕೆಯಿಲ್ಲ. ರಾಜ್ಯ ಸರಕಾರ ನಾರಿನ ಕೈಗಾರಿಕೆಗಳ ಅಭಿವೃದ್ಧಿ-ಗೆಂದೇ ಕಾಯಕ ಯೋಜನೆ ರೂಪಿಸಿ, ಮೀಸಲಿಟ್ಟಿರುವ 100 ಕೋಟಿ ರೂ ಸಬ್ಸಿಡಿ ಬಳಕೆಯಾಗದೆ ಉಳಿದಿದೆ. ತುಮಕೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಿಪ್ಪೆ (ಮೊಟ್ಟೆ) ಸೇರಿದಂತೆ ಕಚ್ಚಾ ವಸ್ತುಗಳನ್ನು ತಮಿಳು-ನಾಡು ಮತ್ತು ಕೇರಳ ಮತ್ತಿತರ ರಾಜ್ಯಗಳಿಗೆ ರವಾನಿಸಲಾಗುತ್ತಿದೆ. ಶೇ.10ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿವೆ. ಅಲ್ಲಿ ತಯಾರಾಗುವ ನಾರಿನ ಉತ್ಪನ್ನಗಳು ವಿದೇಶಗಳಿಗೆ ಯಥೇಚ್ಛವಾಗಿ ರಫ್ತಾಗುತ್ತಿವೆ ಕಲ್ಪವೃಕ್ಷ ಕಾಯಕನಾರಿನ ಕೈಗಾರಿಕೆಗಳ ಅಭಿವೃದ್ಧಿಗೆಂದೇ ಸರಕಾರ ಕಲ್ಪವೃಕ್ಷ ಕಾಯಕ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರಡಿ ನಾರಿನ ಉತ್ಪನ್ನಗಳ ಕೈಗಾರಿಕೆಗಳಿಗೆ 100 ಕೋಟಿ ರೂ ಸಬ್ಸಿಡಿಗೆ ಮೀಸಲಿಡಲಾಗಿದೆ. ಯುವ ಉದ್ಯಮಿಗಳು ಮನಸ್ಸು ಮಾಡಿದರೆ, ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದು. ಅತೀ ಹೆಚ್ಚು ತೆಂಗು ಬೆಳೆಯುವ ತುಮಕೂರಿನ ನಾನಾ ಕಡೆಗಳಲ್ಲಿ ನಾನಾ ರೀತಿಯ ನಾರಿನ ಉತ್ಪನ್ನಗಳ ಕೈಗಾರಿಕೆಗಳನ್ನು ಆರಂಭಿಸಬಹುದು. ಅಲ್ಲದೆ 10 ಎಕರೆ ಜಾಗವಿದ್ದರೆ, ಆ ಜಾಗದಲ್ಲಿ ಕಾಯರ್‌ ಪಾರ್ಕ್ ಅಥವಾ ನಾರಿನ ಉತ್ಪನ್ನಗಳ ಪಾರ್ಕ್ ಸ್ಥಾಪಿಸಬಹುದು. ಅದರ ಮೂಲ- ಭೂತ ಸೌಕರ್ಯ, ವಿನ್ಯಾಸಕ್ಕೆ ಕೃಷಿ ಸಂಪದ ಯೋಜನೆ ನೆರವಾಗುತ್ತದೆ. ಹೀಗೆ ಕೃಷಿಸಂಪದ ಮತ್ತು ಕಲ್ಪವೃಕ್ಷ ಕಾಯಕ ಯೋಜನೆಯನ್ನು ಬಳಸಿಕೊಂಡು, ಉದ್ಯಮ ಆರಂಭಿಸುವ ಅವಕಾಶವಿದೆ. ಆದರೆ, ಯೋಜನೆ ಬಗ್ಗೆ ಅರಿವಿಲ್ಲದೆ ಯೋಜನೆಗಳು ಕೇವಲ ಕಡತಕ್ಕೆ ಸೀಮಿತವಾದಂತಿವೆ. ಬೇಕಿದೆ ಉತ್ತೇಜನಕರ್ನಾಟಕ ತೆಂಗಿನ ನಾರಿನ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ತೆಂಗಿನ ನಾರಿನ ಮಹಾಮಂಡಳಿಗಳು ನಾರಿನ ಕೈಗಾರಿಕಾ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸಬೇಕಿದೆ. ಈ ನಿಗಮ, ಮಂಡಳಿಗಳು ಮಾರುಕಟ್ಟೆ ಹಾಗೂ ರಫ್ತಿಗೆ ಉತ್ತೇಜನ ಕೊಡುವ ಕೆಲಸ ಮಾಡಬೇಕಿದೆ.


from India & World News in Kannada | VK Polls https://ift.tt/3bGcRSP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...