
ವಾಷಿಂಗ್ಟನ್: ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಇದೇ ಮೊದಲ ಬಾರಿಗೆ ತನಗಾದ ಜನಾಂಗೀಯ ನಿಂದನೆಯ ಅವಮಾನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಅಮೆರಿಕ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಶಾಲಾ ದಿನಗಳಲ್ಲಿ ತನ್ನನ್ನು ಮಾಡಿದ ಸಹಪಾಠಿಯ ಮೂಗು ಮುರಿದಿದ್ದೆ ಎಂದು ಹೇಳಿಕೊಂಡಿದ್ದಾರೆ. ನಾನು ಶಾಲೆಯಲ್ಲಿ ಕಲಿಯುತ್ತಿರುವಾಗ ನನಗೊಬ್ಬ ಸ್ನೇಹಿತರನಿದ್ದ. ನಾವಿಬ್ಬರು ಒಟ್ಟಿಗೆ ಬಾಸ್ಕೆಟ್ ಬಾಲ್ ಆಡುತ್ತಿದ್ದೆವು. ಒಂದು ದಿನ ನಮ್ಮ ಮಧ್ಯೆ ಯಾವುದೋ ಒಂದು ಕಾರಣಕ್ಕೆ ಜಗಳ ಉಂಟಾಯಿತು. ಈ ವೇಳೆ ನನ್ನನ್ನು ಆತ ಜನಾಂಗೀಯವಾಗಿ ನಿಂದಿಸಿದ್ದ ಎಂದು ಒಬಾಮ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅವನ ಹೇಳಿಕೆಯಿಂದಾಗಿ ನಾನು ಕ್ರುದ್ಧಗೊಂಡಿದ್ದೆ. ನನಗೆ ಈಗಲೂ ನೆನಪಿದೆ. ಅವನ ಕಪಾಳಕ್ಕೆರಡು ಬಾರಿಸಿ, ಅವನ ಮೂಗನ್ನು ಮುರಿದಿದ್ದೆ ಎಂದು ಹೇಳಿದ್ದಾರೆ. ಅಲ್ಲದೇ ಆತ ಜನಾಂಗೀಯ ನಿಂದನೆ ಮಾಡಲು ಬಳಕೆ ಮಾಡಿದ ಪದದಿಂದಾಗಿ ನಾನು ಭಾರೀ ಬೇಸರಗೊಂಡಿದೆ. ಅಲ್ಲದೇ ಕೋಪ ಕೂಡ ಬಂದಿತ್ತು. ಹೀಗಾಗಿ ಅವನ ಮೇಲೆ ಹಲ್ಲೆ ಮಾಡಿದ್ದೆ ಎಂದು ಒಬಾಮ ಹಳೇಯ ಘಟನೆಯನ್ನು ಮೆಲುಕು ಹಾಕಿದ್ದಾರೆ. ಅಮೆರಿಕದಲ್ಲಿ ಜನಾಂಗೀಯ ನಿಂದನೆ ಬಗ್ಗೆ ಚರ್ಚೆಗಳು, ಹೋರಾಟಗಳು ಉತ್ತುಂಗದಲ್ಲಿ ಇದ್ದ ವೇಳೆಯಲ್ಲಿ ನಾನು ಜನಿಸಿದ್ದೆ. ಜನಾಂಗೀಯವಾಗಿ ನಿಂದಿಸುವಂಥ ಮಾತುಗಳು ತೀವ್ರ ಬೇಸರ ಉಂಟು ಮಾಡುತ್ತದೆ ಎಂದು ವಿಶ್ವದ ಅತೀ ದೊಡ್ಡ್ ಆರ್ಥಿಕ ರಾಷ್ಟ್ರವನ್ನು ಎಂಟು ತಿಂಗಳುಗಳ ಕಾಲ ಮುನ್ನಡೆಸಿದ್ದ ಒಬಾಮ ಹೇಳಿದ್ದಾರೆ. ಈ ವೇಳೆ ಜನಾಂಗೀಯ ಸಂಘರ್ಷದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಜನಾಂಗೀಯ ಸಂಘರ್ಷ ಈಗ ಇದೆಯೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ದಿನ ಬೆಳಗಾಗುವುದರೊಳಗೆ ಮುಗಿಯುವ ಸಮಸ್ಯೆಯೂ ಇದಲ್ಲ. 200 - 300 ಹಿಂದೆ ಏನೆಲ್ಲಾ ನಡೆದಿದೆ ಎನ್ನುವದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಧಿಕಾರದಲ್ಲಿ ಇದ್ದಾಗಳೂ ಬಳಿಕ ಕೆಳಗೆ ಇಳಿದ ಬಳಿಕವೂ ಜನಾಂಗೀಯ ನಿಂದನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದ ಒಬಾಮ, ಇದೇ ಮೊದಲ ಬಾರಿಗೆ ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
from India & World News in Kannada | VK Polls https://ift.tt/2MkzdRl