
ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ: ಭಾಗದಲ್ಲಿ ಸುರಿದ ಅಕಾಲಿಕ ಮಳೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. 1503 ಎಕರೆ ಕಾಫಿ, ಹತ್ತಾರು ಬೆಳೆನಷ್ಟವಾಗಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ವ್ಯಾಪ್ತಿಯ ಅಂಕನಹಳ್ಳಿ, ಮೆಣಸ, ಕೈಸರವಳ್ಳಿ, ಗಂಗವಾರ, ಸೀಗೆಮರೂರು, ಬೆಟ್ಟದಹಳ್ಳಿ, ಮನರಹಳ್ಳಿ, ನಾಗವಾರ, ಮೈಲಾದಪುರ, ಬಡಬನಹಳ್ಳಿ, ಅಮ್ಮಳ್ಳಿಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕೃಷಿಕರು ತತ್ತರಿಸಿದ್ದು, ಕಾಫಿ, ಕಾಳುಮೆಣಸು, ಬಾಳೆ, ಅಡಕೆ, ಜೋಳ, ಹಸಿ ಮೆಣಸು, ಶುಂಠಿ, ಮರಗೆಣಸು ಬೆಳೆಗೆ ಆಪತ್ತು ಉಂಟಾಗಿದೆ. ಆಲಿಕಲ್ಲು ಮಳೆಗೆ ಆಲೂರು ಸಿದ್ದಾಪುರ ವ್ಯಾಪ್ತಿಯ 15 ಗ್ರಾಮಗಳು ತುತ್ತಾಗಿದ್ದು, 1,503 ಎಕರೆ ಕಾಫಿ ಬೆಳೆ ನಾಶವಾಗಿದೆ. ಅಲ್ಲದೇ, ನೂರಾರು ಎಕರೆಯಲ್ಲಿ ಬೆಳೆದಿದ್ದ ಕಾಳುಮೆಣಸು, ಬಾಳೆ, ಅಡಿಕೆ, ಜೋಳ, ಹಸಿಮೆಣಸಿನಕಾಯಿ, ಶುಂಠಿ, ಮರಗೆಣಸು ಬೆಳೆಗಳು ಸಂಪೂರ್ಣವಾಗಿ ಹಾನಿಗೀಡಾಗಿದ್ದು, ರೈತನ ಬೆನ್ನಿಗೆ ಮತ್ತೊಮ್ಮೆ ಬರೆ ಎಳೆದ ಸ್ಥಿತಿ ನಿರ್ಮಾಣವಾದಂತಾಗಿದೆ. ಈ ವ್ಯಾಪ್ತಿಯಲ್ಲಿ ಬಹುತೇಕ ಕೃಷಿಕರೇ ಇದ್ದು, ಬಹುತೇಕ ಮಂದಿ ಸಾಲ ಮಾಡಿಕೊಂಡು ಕೃಷಿಯಲ್ಲಿ ನಿರತರಾಗಿರುತ್ತಾರೆ. ಪ್ರಕೃತಿ ವಿಕೋಪ, ಲಾಕ್‌ಡೌನ್, ಅಕಾಲಿಕ ಮಳೆಗೆ ತತ್ತರಿಸಿದ್ದ ರೈತರು ಇದೀಗಷ್ಟೇ ಚೇತರಿಕೆಯ ನಿರೀಕ್ಷೆಯಲ್ಲಿದ್ದರು. ಆದರೆ ಆಲಿಕಲ್ಲು ಕೈಗೆ ಬಂದ ತುತ್ತನ್ನು ಕಸಿದುಕೊಂಡಿದೆ ಎಂದು ಈ ಭಾಗದ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. 1,503 ಎಕರೆ ಪ್ರದೇಶದ ಕಾಫಿ ಗಿಡಗಳಿಗೆ ಆಲಿಕಲ್ಲು ಮಳೆ ಹಾನಿಕಾರಕವಾಗಿದ್ದು, ಕೊಯ್ಲುಆಗದೇ ಇರುವವರಿಗೆ ನಷ್ಟವಾಗಿದೆ. ಇದರೊಂದಿಗೆ ಕಾಫಿ ಗಿಡಗಳ ಬೇರುಗಳಿಗೂ ತೊಂದರೆ ಉಂಟಾಗಿರುವ ಸಾಧ್ಯತೆಗಳಿವೆ. ಕಾಫಿಗಿಡಗಳ ಬೇರುಗಳಿಗೆ ತೊಂದರೆ ಉಂಟಾಗಿದ್ದಲ್ಲಿ ಅವು ಮತ್ತೆ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟವಾಗಲಿದೆ ಎನ್ನುತ್ತಾರೆ ಕಾಫಿ ಮಂಡಳಿ ಅಧಿಕಾರಿ ಶಿವಕುಮಾರ ಸ್ವಾಮಿ. ನರ್ಸರಿಗೂ ಸಂಕಷ್ಟಆಲಿಕಲ್ಲು ಮಳೆಯಿಂದಾಗಿ ರೈತರು ಮಾಡಿದ್ದ ನರ್ಸರಿಗೂ ಆಪತ್ತು ಉಂಟಾಗಿದೆ. ಈ ವ್ಯಾಪ್ತಿಯ ಹಲವು ಕೃಷಿಕರು ಕಾಫಿ, ಅಡಕೆ ಹಾಗೂ ಕರಿಮೆಣಸು ನರ್ಸರಿ ಮಾಡಿದ್ದರು. ಆದರೆ ಬೃಹತ್ ಆಲಿಕಲ್ಲು ಇವುಗಳ ಮೇಲೂ ಬಿದ್ದು, ಗಿಡಗಳ ನಾಶಕ್ಕೆ ಕಾರಣವಾಗಿದೆ. ಶುಕ್ರವಾರ ಬಿದ್ದ ಆಲಿಕಲ್ಲು ಕೆಲವೆಡೆ ಇನ್ನೂ ಕರಗದೇ ಬಿಳಿಯ ಕಲ್ಲುಗಳಂತೆ ಹಾಗೇಯೇ ಉಳಿದುಕೊಂಡಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ಅಂಕನಹಳ್ಳಿಯ ರೈತ ಎಂ.ಎಸ್ ಮಹದೇವಪ್ಪ. ಅಕಾಲಿಕ ಮಳೆಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿಯೂ ಮಳೆಯಾಗಿದ್ದು, ಈ ಮಳೆಯಿಂದಾಗಿಯೂ ಸಾಕಷ್ಟು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಣ್ಣ ಸಣ್ಣ ಕಾಫಿ ಬೆಳೆಗಾರರು ಈಗಾಗಲೇ ಕೊಯ್ಲಿನ ಕೆಲಸ ಮುಗಿಸಿದ್ದಾರೆ. ಆದರೆ ದೊಡ್ಡ ಬೆಳೆಗಾರರು ಕಾಫಿ ಕೊಯ್ಲಿನ ಕೆಲಸವನ್ನು ಇನ್ನು ಪೂರ್ಣಪ್ರಮಾಣದಲ್ಲಿ ಪೂರ್ತಿಗೊಳಿಸಿಲ್ಲ. ಕಾರ್ಮಿಕರ ಕೊರತೆ ಇದಕ್ಕೆ ಕಾರಣ. ಹೀಗಾಗಿ ಈ ಅಕಾಲಿಕ ಮಳೆಯಿಂದಾಗಿ ಕೊಯ್ಲುಮಾಡಬೇಕಿದ್ದ ಕಾಫಿ ನೆಲಕಚ್ಚಿದೆ. ಕೊಯ್ಲುಮಾಡಿ ಒಣಗಿಸಲು ಇಟ್ಟಿದ್ದ ಕಾಫಿ ನೀರುಪಾಲಾಗಿದೆ.
from India & World News in Kannada | VK Polls https://ift.tt/2MjzzHL