: ತನ್ನ ಸಂಬಂಧಿಕರಲ್ಲೇ ಗೌಪ್ಯವಾಗಿ ಮಾಡಲ್ಪಟ್ಟಿರುವ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ. ಈ ಸಂಬಂಧ ಆಕೆಯ ಹಾಗೂ ಮದುವೆ ಮಾಡಿಸಿರುವ ನಾಲ್ವರ ವಿರುದ್ಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕಲಬುರಗಿಯ ಕೋಟನೂರು ಗ್ರಾಮದ 15 ವರ್ಷದ ಬಾಲಕಿಯನ್ನು ಆಕೆಯ ಸಂಬಂಧಿಕ ಮಹಾರಾಷ್ಟ್ರ ಮೂಲದ ಯುವಕ ಮದುವೆಯಾಗಿದ್ದಾನೆ. ಮೂರು ತಿಂಗಳ ಹಿಂದೆಯೇ ಗೌಪ್ಯವಾಗಿ ಮಹಾರಾಷ್ಟ್ರದಲ್ಲಿ ಮದುವೆ ಮಾಡಿಕೊಡಲಾಗಿದೆ. ಈಗ ಗರ್ಭಿಣಿಯಾಗಿದ್ದಾಳೆ. ಈ ವಿಷಯ ವ್ಯಕ್ತಿಯೊಬ್ಬರಿಂದ ಪೊಲೀಸರಿಗೆ ಗೊತ್ತಾಗಿದ್ದು, ಸ್ಥಳೀಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿ ಮದುವೆಯಾಗಿದ್ದು, ಆಕೆ ಗರ್ಭ ಧರಿಸಿರುವುದು ದಾಖಲೆಗಳಿಂದ ಸಾಬೀತಾಗಿದೆ. ಹೀಗಾಗಿ ಪತಿ ಸೇರಿ ಮದುವೆ ಮಾಡಿಸಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
from India & World News in Kannada | VK Polls https://ift.tt/2NrzQZF