ಬೆಂಗಳೂರು: 11 ಸಿಂಗಲ್‌ ಬ್ಯಾರಲ್‌ ನಾಡ ಬಂದೂಕು ಅಕ್ರಮವಾಗಿ ಇಟ್ಟುಕೊಂಡಿದ್ದ ವ್ಯಕ್ತಿಯ ಬಂಧನ!

ಬೆಂಗಳೂರು: ನಗರದಲ್ಲಿಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಬಂಧಿಸಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಆತನಿಂದ ಒಂದು ಬೈಕ್‌ ಹಾಗೂ 11 ಸಿಂಗಲ್‌ ಬ್ಯಾರಲ್‌ ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದ ಎಸ್‌. ಲಿಂಗಾಚಾರಿ (58) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಒಂದು ಬಜಾಜ್‌ ಬೈಕ್‌ ಹಾಗೂ 11 ಸಿಂಗಲ್‌ ಬ್ಯಾರಲ್‌ ನಾಡ ಬಂದೂಕುಗಳು, ಕಬ್ಬಿಣದ ಬ್ಯಾರಲ್‌ ಕೊಳವೆಗಳು, ಮದ್ದು ತುಂಬಲು ಬಳಸುವ ಸಣ್ಣ ಸರಳುಗಳು, ಒಂದು ಕಬ್ಬಿಣದ ಇಕ್ಕಳ, ಒಂದು ನಾಡ ಬಂದೂಕಿಗೆ ಅಳವಡಿಸುವ ಟ್ರಿಗರ್‌, ಒಂದು ಕಬ್ಬಿಣದ ಸುತ್ತಿಗೆ, ಒಂದು ಕಬ್ಬಿಣದ ಚಾಣ, ಒಂದು ಕಬ್ಬಿಣದ ಹುಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಲಿಂಗಾಚಾರಿ ಕನಕಪುರದಲ್ಲಿನಾಡ ಬಂದೂಕುಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿಸುತ್ತಿಕೊಂಡು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆ ವ್ಯಾಪ್ತಿಯ ಬನಶಂಕರಿಯ 3ನೇ ಹಂತದ ಇಟ್ಟಮಡು ಬಸ್‌ ನಿಲ್ದಾಣದಲ್ಲಿ ಕಾಯುತ್ತಾ ನಿಂತಿದ್ದ. ಈ ವೇಳೆ ಸ್ಥಳೀಯರೊಬ್ಬರು ಈತನ ಚಲನವಲನಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ''ಆರೋಪಿ ಲಿಂಗಾಚಾರಿ ಬಂದೂಕು ಬೇಕೆಂದು ಯಾರು ಆರ್ಡರ್‌ ಮಾಡುತ್ತಾರೋ ಅವರಿಗೆ ಬಂದೂಕು ತಯಾರಿಸಿ ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಹಣದ ಆಸೆಗೆ ಈ ವೃತ್ತಿ ಮಾಡುತ್ತಿದ್ದ. ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ನಗರದಲ್ಲಿ ಕೆಲವರಿಗೆ ಬಂದೂಕು ಮಾರಾಟ ಮಾಡಲು ಬಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಯಾರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ'' ಎಂದು ಪೊಲೀಸರು ವಿವರಿಸಿದರು.


from India & World News in Kannada | VK Polls https://ift.tt/3dsyIQ7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...