ನವದೆಹಲಿ: ಮಾರಕ ಕೊರೊನಾ ವೈರಸ್ ಹಾವಳಿಯಿಂದ ಮುಂದೂಡಲ್ಪಟ್ಟಿದ್ದ ರಾಜ್ಯಸಭೆ ಚುನಾವಣೆಗೆ ಕೊನೆಗೂ ಇಂದು(ಶುಕ್ರವಾರ) ಮುಹೂರ್ತ ಕೂಡಿ ಬಂದಿದೆ. ಅದರಂತೆ ಒಟ್ಟು 24 ರಾಜ್ಯಸಭಾ ಸೀಟುಗಳಿಗೆ ಇಂದು ಮತದಾನ ನಡೆಯಲಿದ್ದು. ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಮುಖವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲು ವಿಶೇಷ ಒತ್ತು ನೀಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅದರಂತೆ ಇಂದು(ಶುಕ್ರವಾರ) ನಡೆಯಲಿರುವ ರಾಜ್ಯಸಭೆ ಚುನಾವಣೆಯ ಪ್ರಮುಖ ಸಂಗತಿಗಳತ್ತ ಗಮನಹರಿಸಿದರೆ... 1. ಒಟ್ಟು 24 ರಾಜ್ಯಸಭಾ ಸೀಟುಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ. 2. ಚುನಾವಣೆ ನಡೆಯಲಿರುವ ರಾಜ್ಯಗಳು: ಗುಜರಾತ್-04 ಆಂಧ್ರಪ್ರದೇಶ-04 ಕರ್ನಾಟಕ-04 ಮಧ್ಯಪ್ರದೇಶ-03 ರಾಜಸ್ಥಾನ-03 ಜಾರ್ಖಂಡ್-02 ಮೇಘಾಲಯ-01 ಮಣಿಪುರ-01 ಅರುಣಾಚಲಪ್ರದೇಶ-01 ಮಿಜೋರಾಂ-01 3. 9 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಪೂರ್ಣ ತಯಾರಿ ನಡೆಸಿದೆ. 4. ಮತದಾನ ಮಾಡುವ ಎಲ್ಲಾ ಶಾಸಕರನ್ನು ಸ್ಕ್ರೀನಿಂಗ್‌ಗೆ ಗುರಿಪಡಿಸಲಿದ್ದು, ಮತದಾನದ ವೇಳೆ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. 5. ಜ್ವರ ಮತ್ತು ಇತರೆ ಅನಾರೋಗ್ಯದಿಂದ ಬಳಲುತ್ತಿರುವ ಶಾಸಕರಿಗೆ ಮತದಾನ ಮಾಡಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. 6. ಪ್ರಸ್ತುತ ರಾಜ್ಯ ಸಭೆಯ ಬಲಾಬಲ: ಬಿಜೆಪಿ-91 ಕಾಂಗ್ರೆಸ್-61 ಇತರರು- 68 7. ಮಧ್ಯಪ್ರದೇಶದಿಂದ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ ಇಂದಿನ ಚುನಾವಣೆಯ ಆಕರ್ಷಕ ಅಭ್ಯರ್ಥಿಯಾಗಿದ್ದಾರೆ. 8.ಹಲವು ಗುಜರಾತ್ ಕಾಂಗ್ರೆಸ್ ಶಾಸಕರು ಪಕ್ಷ ತ್ಯಜಿಸಿರುವುದರಿಂದ ಗುಜರಾತ್ ರಾಜ್ಯಸಭೆ ಚುನಾವಣೇ ಭಾರೀ ಗಮನ ಸೆಳೆದಿದೆ. 9. ರಾಜಸ್ಥಾನದಲ್ಲಿ ಕುದುರೆ ವ್ಯಾಪಾರದ ಅನುಮಾನದ ಕಾರಣಕ್ಕೆ ಕಾಂಗ್ರೆಸ್ ತನ್ನ ಶಾಸಕರ ಮೇಲೆ ತೀವ್ರ ನಿಗಾ ಇರಿಸಿದೆ. 10. ಮಣಿಪುರದಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಗಮನಾರ್ಹ. ಹೀಗೆ ಇಂದು ನಡೆಯಲಿರುವ ಇಡೀ ದೇಶದ ಕುತೂಹಲ ಕೆರಳಿಸಿದ್ದು, ಸದ್ಯ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
from India & World News in Kannada | VK Polls https://ift.tt/2Yj4yXT