ಬಿ.ಕೆ ಹರಿಪ್ರಸಾದ್‌ಗೆ ಮೇಲ್ಮನೆ ಟಿಕೆಟ್‌, ಅಸಮಾಧಾನಕ್ಕೆ ಡಿಕೆಶಿ ಪ್ರತಿಕ್ರಿಯೆ ಏನು?

ಬೆಂಗಳೂರು: ಹಿರಿಯರು ಎಂಬ ಕಾರಣಕ್ಕಾಗಿ ಅವರ ಹೆಸರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಪರಿಷತ್‌ನ ಎರಡು ಸ್ಥಾನಗಳಿಗೆ 270 ರಷ್ಟು ಆಕಾಂಕ್ಷಿಗಳಿದ್ದರು. ಈ ಕುರಿತಾಗಿ ನಾವು ಚರ್ಚೆ ಮಾಡಿ ಮೂರ್ನಾಲ್ಕು ಸಮುದಾಯಗಳನ್ನು ಪರಿಗಣಿಸಿದ್ದೆವು. ಅಭ್ಯರ್ಥಿ ವಿಚಾರವಾಗಿ ನಮ್ಮ‌ಸಲಹೆ ಪರಿಗಣಿಸಿ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಹರಿಪ್ರಸಾದ್ ನನಗಿಂತ ಹಿರಿಯರು, ಈ ನಿಟ್ಟಿನಲ್ಲಿ ಪರಿಷತ್‌ಗೆ ಓರ್ವ ಹಿರಿಯ ನಾಯಕನಿಗೆ ಟಿಕೆಟ್ ನೀಡಲಾಗಿದೆ.ಒಬ್ಬ ಉತ್ತಮ ಅಭ್ಯರ್ಥಿಯನ್ನ ಹೈಕಮಾಂಡ್ ಆಯ್ಕೆಮಾಡಿದೆ ಎಂದರು. ಕಾಂಗ್ರೆಸ್‌ನಲ್ಲಿ ಹೊಸ ಮುಖಗಳಿಗೆ ಸ್ಥಾನ ಯಾಕಿಲ್ಲ ಎಂಬ ಪ್ರಶ್ನೆಗೆ, ಅಸೆಂಬ್ಲಿ ಚುನಾವಣೆಯಲ್ಲಿ ಯುವ ಮುಖಗಳಿಗೆ ಅವಕಾಶ ನೀಡ್ತೇವೆ. ಇದು ಮೇಲ್ಮೆನೆಯಾಗಿರುವುದರಿಂದ ಹಿರಿಯರನ್ನು ಆಯ್ಕೆ ಮಾಡಿದ್ದೇವೆ ಎಂದರು. ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್‌ ಅವರಿಗೆ ಮೇಲ್ಮನೆ ಟಿಕೆಟ್‌ ನೀಡಿರುವುದುಕಾಂಗ್ರೆಸ್ ಪಕ್ಷದದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದುಳಿದ ವರ್ಗದ ಮುಖಂಡರೊಬ್ಬರನ್ನು ಮೇಲ್ಮನೆಗೆ ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಚೆಕ್‌ಮೆಟ್‌ ನೀಡುವುದು ಇದರ ಹಿಂದಿರುವ ಉದ್ದೇಶ ಎಂಬ ಮಾತು ಕೇಳಿಬರುತ್ತಿದೆ.


from India & World News in Kannada | VK Polls https://ift.tt/3dj6HXO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...