ಚೀನಾಗೆ ಸಡ್ಡು ಹೊಡೆದ ಕೀನ್ಯಾ: ಪುಟ್ಟ ರಾಷ್ಟ್ರ ನೀಡಿದ ಪೆಟ್ಟಿಗೆ ಬೆವರಿದ ಡ್ರ್ಯಾಗನ್!

ನೈರೋಬಿ: ವಿಶ್ವ ವೇದಿಕೆಯಲ್ಲಿ ಚೀನಾ ಒಬ್ಬಂಟಿಯಾಗುತ್ತಿದೆ ಎಂಬುದಕ್ಕೆ ದಿನವೂ ಹಲವಾರು ನಿದರ್ಶನಗಳು ಕಾಣಸಿಗುತ್ತಿವೆ. ಪತ್ರಿ ದೇಶವನ್ನೂ ತನ್ನ ಹೂಡಿಕೆಯ ಮೂಲಕವೇ ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ಚೀನಾದ ಸೊಕ್ಕಿನ ವರ್ತನೆಗೆ ಒಂದೊಂದೇ ರಾಷ್ಟ್ರಗಳು ಉತ್ತರ ನೀಡತೊಡಗಿವೆ. ಅದರಂತೆ ಯಾರೂ ಊಹಿಸದ ರೀತಿಯಲ್ಲಿ ಚೀನಾದ ಬೆವರಿಳಿಸಿರುವ ಪೂರ್ವ ಆಫ್ರಿಕಾದ ಪುಟ್ಟ ರಾಷ್ಟ್ರ ,ತನ್ನ ದೇಶದಲ್ಲಿ ಚೀನಾ ಕೈಗೊಂಡಿರುವ ರೈಲು ಯೋಜನೆ ಕಾನೂನುಬಾಹಿರ ಎಂದು ಘೋಷಿಸಿದೆ. ಹೌದು, ಕೀನ್ಯಾದಲ್ಲಿ ಬರೋಬ್ಬರಿ 3.2 ಬಿಲಿಯನ್ ಡಾಲರ್ ಮೊತ್ತದ ರೈಲು ಯೋಜನೆ ಕೈಗೊಂಡಿದ್ದ ಚೀನಾ, ಪೂರ್ವ ಆಫ್ರಿಕಾದ ಪುಟ್ಟ ರಾಷ್ಟ್ರದಲ್ಲಿ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಈ ಯೋಜನೆಯನ್ನು ಕಾನೂನುಬಾಹಿರ ಎಂದಿರುವ ಕೀನ್ಯಾದ ನ್ಯಾಯಾಲಯ, ಕೂಡಲೇ ಈ ಯೋಜನೆಗೆ ತಡೆ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಚೀನಾದ ರಸ್ತೆ ಹಾಗು ಸೇತುವೆ ನಿರ್ಮಾಣ ನಿಗಮದ ಕಾನೂನುಬಾಹಿರ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಚೀನಾದ CRBC ಯೋಜನೆ ಪ್ರಶ್ನಿಸಿ 2014ರಲ್ಲೇ ಸಾಮಾಜಿಕ ಹೋರಾಟಗಾರ ಓಕಿಯಾ ಒಮ್ಟಾಹಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದೀಗ CRBC ವಿರುದ್ಧ ತೀರ್ಪು ನೀಡಿದೆ. ಆದರೆ 2017ರಲ್ಲೇ SGR ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈಗಾಗಲೇ ದೇಶದ ಹಲವು ಭಾಗಗಳಲ್ಲಿ ರೈಲು ಸಂಚಾರ ಆರಂಭವಾಗಿದೆ. ಅದಾಗ್ಯೂ ಈ ಯೋಜನೆಯನ್ನು ಕಾನೂನುಬಾಹಿರ ಎಂದು ನ್ಯಾಯಾಲಯ ಘೋಷಿಸಿದೆ.


from India & World News in Kannada | VK Polls https://ift.tt/3hZG91i

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...