ಮಾಸ್ಕೋ: ಇಲ್ಲಿ ನಡೆದ 75ನೇ ವಿಕ್ಟರಿ ಡೇ ಪರೇಡ್‌ನಲ್ಲಿ ಭಾರತದ ಮೂರೂ ರಕ್ಷಣಾ ಪಡೆಗಳ ಯೋಧರು ಜಂಟಿ ಆಕರ್ಷಕ ಪಥಸಂಚಲನ ನಡೆಸಿ ಗಮನ ಸೆಳೆದರು. ಮಾಸ್ಕೋದ ಐತಿಹಾಸಿಕ ಕೆಂಪು ಚೌಕದಲ್ಲಿ ನಡೆದ 75ನೇ ವಿಕ್ಟರಿ ಡೇ ಪರೇಡ್‌ನಲ್ಲಿ ಭಾರತದ ರಕ್ಷಣಾ ಸಚಿವ ಭಾಗವಹಿಸಿದ್ದರು. ಈ ವೇಳೆ ಭಾರತದ ಮೂರೂ(ಭೂ, ವಾಯು, ನೌಕಾಸೇನೆ) ರಕ್ಷಣಾ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಭಾರತೀಯ ರಕ್ಷಣಾ ಪಡೆಗಳ ಜಂಟಿ ಪಥಸಂಚಲನ ಕೆಂಪು ಚೌಕವನ್ನು ತಲುಪುತ್ತಿದ್ದಂತೇ ರಾಜನಾಥ್ ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ನಮ್ಮ ಸೈನಿಕರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು. ಕೇವಲ ಭಾರತ ಮಾತ್ರವಲ್ಲದೇ, , ಚೀನಾದ ಪಡೆಗಳಿಂದಲೂ ಜಂಟಿ ಪಥಸಂಚಲನ ನಡೆಯಿತು. ಈ ವೇಳೆ ಎರಡನೇ ಮಹಾಯುದ್ಧದಲ್ಲಿ ರಷ್ಯಾದ ಅಂತಿಮ ಜಯವನ್ನು ಸಂಭ್ರಮಿಸಲಾಯಿತು. ಏನಿದು ?: 1935-41ರ ವರೆಗೆ ನಡೆದ ಭೀಕರ ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನೇತೃತ್ವದ ನಾಜಿ ಸೇನೆಯನ್ನು ಸೋಲಿಸಿ ರಷ್ಯಾ ಪಡೆಗಳು ಜಯ ಸಾಧಿಸಿದ್ದವು. ಈ ಸಂಘರ್ಷದಲ್ಲಿ ಹಿಟ್ಲರ್ ಆತ್ಮಹತ್ಯೆಗೆ ಶರಣಾಗಿದ್ದ. ಈ ದಿನವನ್ನು ರಷ್ಯಾದಲ್ಲಿ ವಿಕ್ಟರಿ ಡೇಯನ್ನಾಗಿ ಆಚರಿಸಲಾಗುತ್ತದೆ.
from India & World News in Kannada | VK Polls https://ift.tt/2Nnwkfd