ಉನ್ನತ ಶಿಕ್ಷಣದಲ್ಲಿ ಏಕರೂಪ ಪಠ್ಯದಿಂದ ಪ್ರಾದೇಶಿಕತೆಗೆ ಧಕ್ಕೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಆತಂಕ

ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಪಠ್ಯಕ್ರಮವನ್ನು ಜಾರಿಗೆ ತರಲು ಹೊರಟಿರುವ ಶಿಕ್ಷಣ ಇಲಾಖೆಯ ನಡೆಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಆತಂಕ ವ್ಯಕ್ತಪಡಿಸಿದೆ. ಈ ಕುರಿತಾಗಿ ಉನ್ನತ ಶಿಕ್ಷಣ ಸಚಿವ ಡಾ. ಅವರಿಗೆ ಪತ್ರ ಬರೆದು ಕ.ಅ.ಪ್ರಾ ಅಧ್ಯಕ್ಷ ಟಿ.ಎಸ್ ನಾಗಾಭರಣ ಆತಂಕ ವ್ಯಕ್ತಪಡಿಸಿದ್ದಾರೆ. ಉನ್ನತ ಶಿಕ್ಷಣದಲ್ಲಿ ಈಗಿರುವ ಬಹುರೂಪ ಪಠ್ಯಕ್ರಮವನ್ನು ತೆಗೆದು ಏಕರೂಪ ಪಠ್ಯಕ್ರಮಗಳನ್ನು ಅಳವಡಿಸುವುದರಿಂದ ವಿವಿಧ ವಿಶ್ವವಿದ್ಯಾಲಯಗಳ ವೈವಿದ್ಯತೆ ಹಾಗೂ ಪ್ರಾದೇಶಿಕ ಸಾಹಿತ್ಯ ಮತ್ತು ಸಾಹಿತಿಗಳ ಕಡಗಣನೆ ಮಾಡಿದಂತೆ ಆಗುತ್ತದೆ. ಈ ಕುರಿತಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕನ್ನಡ ಪ್ರಾಧ್ಯಾಪಕರ ಸಂಘಗಳು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ಏಕರೂಪ ಪಠ್ಯಕ್ರಮಗಳನ್ನು ಅಳವಡಿಸಿರುವುದರಿಂದ ರಾಜ್ಯ ಹಾಗೂ ರಾಷ್ಟ್ರದ ಪ್ರಾತಿನಿಧಿಕ ವಿಷಯಗಳ ಜೊತೆಗೆ ಪ್ರಾದೇಶಿಕತೆಯನ್ನು ಒಳಗೊಳ್ಳುವ ಅವಕಾಶ ಇಲ್ಲವಾಗುವ ಆತಂಕವನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಭಾಷೆ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಇದು ತುಂಬಾ ಅವಶ್ಯಕವಾಗಿದೆ. ಮಕ್ಕಳು ಪ್ರಾದೇಶಿಕ ಅನನ್ಯತೆಯನ್ನು ಹಾಗೂ ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಗಳನ್ನು ಗ್ರಹಿಸುವುದು ಸಾಹಿತ್ಯದ ಅಧ್ಯಯನದಿಂದ. ಹಾಗಾಗಿ ಸಾಂಪ್ರದಾಯಿಕ ವಿವಿ ಶಿಕ್ಷಣ ಹಂತದಲ್ಲಿ ಕಲಾ, ಭಾಷೆ, ಸಾಹಿತ್ಯ, ಸಮಾಜ, ಇತಿಹಾಸ, ರಾಜಕೀಯ ಮುಂತಾದ ವಿಷಯಗಳಲ್ಲಿ ಏಕರೂಪತೆಯ ಪಠ್ಯಕ್ರಮಗಳನ್ನು ಅಳವಡಿಸುವುದರಿಂದ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯು ಇತ್ತೀಚೆಗೆ ಒಂದು ಸೂಚನಾ ಪತ್ರವನ್ನು ಹೊರಡಿಸಿದ್ದು ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಪಠ್ಯವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ವಿವಿಧ ಮಟ್ಟದ ಸಮಿತಿಗಳು, ಮಂಡಳಿಗಳು, ಉದ್ಯಮಿಗಳು, ದೇಶಿಯ ಮತ್ತು ವಿದೇಶಿ ತಜ್ಞರುಗಳೊಂದಿಗೆ ಸಮಾಲೋಚಿಸಲು ಸೂಚಿಸಲಾಗಿದೆ.


from India & World News in Kannada | VK Polls https://ift.tt/3dBqana

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...