ಲಾಕ್‌ಡೌನ್ ಸಡಿಲಿಕೆ: ಬ್ರಿಟನ್ ರಾಣಿಯಿಂದ ಕುದುರೆ ಸವಾರಿ!

ಲಂಡನ್: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿದ್ದ ಲಾಕ್‌ಡೌನ್‌ ನಿಯಮಾವಳಿಗಳಲ್ಲಿ ಬ್ರಿಟನ್ ಸರ್ಕಾರ ಬದಲಾವಣೆ ಮಾಡಿದೆ. ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿರುವ ಪರಿಣಾಮವಾಗಿ ದೇಶದಾದ್ಯಂತ ಲಾಕ್‌ಡೌನ್ ಸಡಿಲಿಕೆ ಘೋಷಣೆ ಮಾಡಲಾಗಿದೆ. ವಾಣಿಜ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಕೂಲವಾಗುವಂತೆ ಲಾಕ್‌ಡೌನ್ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಲಾಗಿದ್ಗದು, ಹಂತ ಹಂತವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಮಹಾರಾಣಿ ಎಲಿಜಬೆತ್ ಮಾಡುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ. 94 ವರ್ಷದ ಕುದುರೆ ಸವಾರಿ ಮಾಡುತ್ತಿರುವುದು ಗಮನ ಸೆಳೆದಿದೆ. ಇಲ್ಲಿನ ವಿಂಡ್ಸರ್ ಹೋಮ್ ಪಾರ್ಕ್‌ನಲ್ಲಿ 14 ವರ್ಷದ ಕುದುರೆ ಏರಿ ರಾಣಿ ಎಲಿಜಬೆತ್ ಕೆಲಹೊತ್ತು ವಾರಿ ಮಾಡಿದರು. ಕ್ವೀನ್ ಎಲಿಜಬೆತ್ ಕುದುರೆ ಸವಾರಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾ ವೈರಸ್ ಪರಿಣಾಮವಾಗಿ ಲಾಕ್‌ಡೌನ್ ಘೋಷಣೆಯಾದ ಕೂಡಲೇ ಲಂಡನ್ ನಗರದ ಪಶ್ಚಿಮದಲ್ಲಿರುವ ವಿಂಡ್ಸರ್ ಕ್ಯಾಸಲ್‌ನಲ್ಲಿ ರಾಣಿ ಎಲಿಜಬೆತ್ ತಮ್ಮ ಪತಿ 98 ವರ್ಷದ ಪ್ರಿನ್ಸ್ ಫಿಲಿಪ್ ಅವರೊಂದಿಗೆ ವಾಸಿಸುತ್ತಿದ್ದಾರೆ.


from India & World News in Kannada | VK Polls https://ift.tt/2zGvqrj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...