ಯುದ್ಧೋನ್ಮಾದ ಖಂಡಿಸಿ ನೇಪಾಳದಲ್ಲಿ ಚೀನಾ ರಾಯಭಾರ ಕಚೇರಿ ಮುಂದೆ ಪ್ರತಿಭಟನೆ!

ಕಠ್ಮಂಡು: ಭಾರತ-ನೇಪಾಳದ ನಡುವೆ ಗಡಿ ತಕರಾರು ಉದ್ಭವವಾಗಿದೆ. ಆದರೆ ಸಾವಿರಾರು ವರ್ಷಗಳ ಈ ಅನೋನ್ಯ ಸಂಬಂಧವನ್ನು ಗಡಿ ರೇಖೆಗಳು ಹಾಳು ಮಾಡಲು ಸಾಧ್ಯವಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಭೀಷಣ ಘರ್ಷಣೆ ವಿರೋಧಿಸಿ, ರಾಜಧಾನಿ ಕಠ್ಮಂಡುವಿನಲ್ಲಿ ಪ್ರತಿಭಟನೆ ನಡೆದಿದೆ. ನೇಪಾಳದ ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕು ಕಾರ್ಯಕರ್ತರು ರಾಜಧಾನಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮುಂದೆ ಭಾರೀ ಪ್ರತಿಭಟನೆ ನಡೆಸಿದ್ದಾರೆ. 'ಯುದ್ಧ ಒಂದು ಅಪರಾಧ' ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರರು, ಯುದ್ಧೋನ್ಮಾದವನ್ನು ಬಿಡುವಂತೆ ಚೀನಾವನ್ನು ಒತ್ತಾಯಿಸಿದರು. ಗಡಿ ಘರ್ಷಣೆಗೆ ಚೀನಿ ಸೈನಿಕರ ಆಕ್ರಮಣಕಾರಿ ವರ್ತನೆಯೇ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಯುದ್ಧೋನ್ಮಾದದ ನೀತಿ ಕೈಬಿಟ್ಟು ಶಾಂತಿ ಮಾತುಕತೆಗೆ ಒತ್ತು ನೀಡಬೇಕೆಂದಯ ಚೀನಾವನ್ನು ಒತ್ತಾಯಿಸಿದರು. ಇಂದು(ಗುರುವಾರ) ನೇಪಾಳ ಸಂಸತ್ತು ಹೊ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ಅನುಮೋದಿಸಿದ್ದು, ಇದರಲ್ಲಿ ಭಾರತದ ಮೂರರು ಭೂ ಪ್ರದೇಶಗಳನ್ನು ಸೇರಿಸಿದೆ. ಆದರೆ ನೇಪಾಳದ ರಸ್ತೆಗಳಲ್ಲಿ ಭಾರತದ ಪರ ಜನ ಧ್ವನಿ ಎತ್ತಿರುವುದು ಗಮನ ಸೆಳೆದಿದೆ.


from India & World News in Kannada | VK Polls https://ift.tt/2N95bN8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...