3 ಭಾರತೀಯ ಭೂಪ್ರದೇಶ ಒಳಗೊಂಡ ವಿವಾದಿತ ನಕ್ಷೆಗೆ ನೇಪಾಳ ಸಂಸತ್ತಿನ ಅನುಮೋದನೆ!

ಕಠ್ಮಂಡು: 3 ಭಾರತೀಯ ಭೂ ಪ್ರದೇಶಗಳನ್ನು ಒಳಗೊಂಡ ವಿವಾದಿತ ಗಡಿ ನಕ್ಷೆಗೆ ಅನುಮೋದನೆ ನೀಡಿದೆ. ಈ ಮೂಲಕ ಭಾರತದೊಂದಿಗೆ ಇದೇ ಮೊದಲ ಬಾರಿಗೆ ನೇಪಾಳ ಗಡಿ ವಿವಾದವನ್ನು ಅಧಿಕೃತಗೊಳಿಸಿದೆ. ನೇಪಾಳದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಲಾಗಿದ್ದ ನವೀಕೃತ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ಇಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸದನದಲ್ಲಿ ಹಾಜರಿದ್ದ ಎಲ್ಲಾ 57 ಸದಸ್ಯರೂ ಹೊಸ ನಕ್ಷೆಯ ಪರವಾಗಿ ಮತ ಚಲಾಯಿಸಿದರು. ಈ ಮೂಲಕ ಓಲಿ ಸರ್ಕಾರದ ನಕ್ಷೆ ಬದಲಾವಣೆ ನಿರ್ಣಯಕ್ಕೆ ಒಮ್ಮತದ ಬೆಂಬಲ ಸೂಚಿಸಲಾಯಿತು. ಭಾರತದ ಲಿಪುಲೇಖ್, ಕಾಲಾಪಾನಿ ಹಾಗೂ ಲಿಂಪಿಯಾಡುರಾ ಭೂ ಪ್ರದೇಶಗಳನ್ನು ಈ ನಕ್ಷೆಯಲ್ಲಿ ನೇಪಾಳ ತನ್ನದೆಂದು ಪ್ರತಿಪಾದಿಸಿದೆ. ಮಾತುಕತೆಯ ಭಾರತದ ಪ್ರಸ್ತಾವನೆಯನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನೇಪಾಳ ನವೀಕೃತ ನಕ್ಷೆಯನ್ನು ಅನುಮೋದಿಸಿದೆ. ನೇಪಾಳದ ನಕ್ಷೆ ಬದಲಾವಣೆ ಕ್ರಮವನ್ನು ಈಗಾಗಲೇ ತಳ್ಳಿ ಹಾಕಿರುವ , ಐತಿಹಾಸಿಕ ಪುರಾವೆಗಳಿಲ್ಲದೇ ಏಕಪಕ್ಷೀಕಯವಾಗಿ ನಕ್ಷೆ ಬದಲಿಸಿರುವ ನೇಪಾಳದ ಕ್ರಮವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.


from India & World News in Kannada | VK Polls https://ift.tt/30Q2Bnj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...