ಜೂ.25ರಂದು ಕೂಡ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ: ಬೆಂಗಳೂರಿನಲ್ಲಿ ಎಷ್ಟಿದೆ?

ನವದೆಹಲಿ: ಕೊರೊನಾದ ತಲೆ ಬಿಸಿ ನಡುವೆ ಜನರಿಗೆ ಇದೀಗ ಜೇಬು ಸುಡುವ ಮಂಡೆ ಬಿಸಿಯು ಒಟ್ಟಿಗೆ ಆಗಿದೆ. ದೇಶದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿದ್ದು ವಾಹನ ಸವಾರರಿಗೆ ಭಾರೀ ಟೆನ್ಷನ್‌ ಆಗಿ ಬಿಟ್ಟಿದೆ. ದೇಶದ ಮಹಾನಗರಗಳಲ್ಲಿ ತೈಲ ದರಗಳ ಬೆಲೆ ಪ್ರತಿನಿತ್ಯ ಏರುತ್ತಲೇ ಇದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆಗೆ ಮರುಚಾಲನೆ ನೀಡಿರುವ ಪರಿಣಾಮವಾಗಿ,ದೇಶದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಜೂ.25ರಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ ದರದಲ್ಲಿ 16 ಪೈಸೆ ಏರಿಕೆ ಕಂಡಿದ್ದು, ಡೀಸೆಲ್‌‌ ಪ್ರತೀ ಲೀಟರ್‌ಗೆ 14 ಪೈಸೆ ಹೆಚ್ಚಾಗಿದೆ. ಕಳೆದ 19 ದಿಗಳಲ್ಲಿ ಪೆಟ್ರೋಲ್‌ ದರದಲ್ಲಿ ಒಟ್ಟು 8 ರೂ. 66 ಪೈಸೆ ಏರಿಕೆ ಕಂಡರೆ, ಡೀಸೆಲ್‌ ‌ ದರದಲ್ಲಿ ಒಟ್ಟು 10 ರೂ. 63 ಪೈಸೆ ಏರಿಕೆ ಕಂಡಿದೆ. ಹಾಗಾದರೆ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ ಎಷ್ಟು? ಇಲ್ಲಿದೆ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲದರಗಳತ್ತ ಗಮನಹರಿಸುವುದಾದರೆ. ಸಿಲಿಕಾನ್ ಸಿಟಿ ಬೆಂಗಳೂರು ಪೆಟ್ರೋಲ್: 82.52 ರೂ. (17 ಪೈಸೆ ಏರಿಕೆ) ಡೀಸೆಲ್: 76.09 ರೂ. (13 ಪೈಸೆ. ಏರಿಕೆ) ರಾಷ್ಟ್ರ ರಾಜಧಾನಿ ನವದೆಹಲಿಪೆಟ್ರೋಲ್: 79.92 ರೂ. (16 ಪೈಸೆ ಏರಿಕೆ) ಡೀಸೆಲ್: 80.02 ರೂ. (14 ಪೈಸೆ ಏರಿಕೆ) ವಾಣಿಜ್ಯ ರಾಜಧಾನಿ ಮುಂಬೈಪೆಟ್ರೋಲ್: 86.70 ರೂ. (16 ಪೈಸೆ ಏರಿಕೆ) ಡೀಸೆಲ್: 778.34 ರೂ. (12 ಪೈಸೆ. ಏರಿಕೆ) ತಮಿಳುನಾಡು ರಾಜಧಾನಿ ಚೆನ್ನೈಪೆಟ್ರೋಲ್: 83.18 ರೂ. (7 ಪೈಸೆ ಏರಿಕೆ) ಡೀಸೆಲ್: 77.29 ರೂ. ( 5 ಪೈಸೆ ಏರಿಕೆ)


from India & World News in Kannada | VK Polls https://ift.tt/2Z5xWQp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...