ಮೌಂಟ್ ಮಾಂಗ್ನುಯಿ: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯ ಭಾನುವಾರ ಮೌಂಟ್ ಮಾಂಗ್ನುಯಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ. ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ವಿರಾಟ್‌ಗೆ ವಿಶ್ರಾಂತಿ; ರೋಹಿತ್‌ಗೆ ಸಾರಥ್ಯ ವೆಲ್ಲಿಂಗ್ಟನ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿಉಪನಾಯಕ ರೋಹಿತ್ ಶರ್ಮಗೆ ವಿಶ್ರಾಂತಿ ನೀಡಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡಲಾಗಿತ್ತು. ಅದೇ ರೀತಿ ಅಂತಿಮ ಟಿ20 ಪಂದ್ಯದಲ್ಲಿ ಸ್ವತಃ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದು ರೋಹಿತ್‌ಗೆ ನಾಯಕ ಪಟ್ಟ ವಹಿಸಿಕೊಡಲಾಗಿದೆ. ಈ ಮೂಲಕ ಟೀಮ್ ಇಂಡಿಯಾದ ಹಂಗಾಮಿ ನಾಯಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸಂಜು ಓಪನರ್, ರೋಹಿತ್ ಒನ್ ಡೌನ್... ಭಾರತ ತಂಡದಲ್ಲಿ ಏಕಮಾತ್ರ ಬದಲಾವಣೆ ತರಲಾಗಿದೆ. ಅಲ್ಲದೆ ಯುವ ಬ್ಯಾಟ್ಸ್‌ಮನ್‌ಗೆ ಸಂಜು ಸ್ಯಾಮ್ಸನ್‌ಗೆ ಮಗದೊಂದು ಅವಕಾಶ ನೀಡಲಾಗಿದೆ. ಅಲ್ಲದೆ ಕೆಎಲ್ ರಾಹುಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದರಿಂದಾಗಿ ನಾಯಕ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯಲಿದ್ದಾರೆ. ಆಡುವ ಬಳಗ ಇಂತಿದೆ: New Zealand (Playing XI): Martin Guptill, Colin Munro, Tim Seifert(w), Ross Taylor, Tom Bruce, Daryl Mitchell, Mitchell Santner, Scott Kuggeleijn, Tim Southee(c), Ish Sodhi, Hamish Bennett India (Playing XI): Lokesh Rahul(w), Sanju Samson, Rohit Sharma(c), Shreyas Iyer, Manish Pandey, Shivam Dube, Washington Sundar, Shardul Thakur, Navdeep Saini, Yuzvendra Chahal, Jasprit Bumrah ಕ್ಲೀನ್ ಸ್ವೀಪ್ ಗುರಿ... ಕಳೆದೆರಡು ಪಂದ್ಯಗಳಲ್ಲಿ ದೊರೆತ 'ಸೂಪರ್' ವಿಜಯ ಸೇರಿದಂತೆ ಇಲ್ಲಿಯ ತನಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿರುವ ಭಾರತ ಈ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡುವತ್ತ ಗಮನ ಹರಿಸಿದೆ. ಇದೇ ವೇಳೆ ಆತಿಥೇಯ ತಂಡ ಕೊನೆಯ ಪಂದ್ಯವನ್ನಾದರೂ ಗೆದ್ದು ಸ್ಥಳೀಯ ಪ್ರೇಕ್ಷಕರಿಗೆ ಕೊಂಚ ಸಮಾಧಾನ ನೀಡುವ ಪ್ರಯತ್ನ ಮಾಡಬಹುದು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ut75x9