ಮೈಸೂರು: ಕಳೆದೆರಡು ದಿನಗಳಿಂದ ಮೈಸೂರಿನ ಪ್ರವಾಸದಲ್ಲಿರುವ ವಿಪಕ್ಷ ನಾಯಕ ಶನಿವಾರ ಬೆಳ್ಳಂ ಬೆಳಗ್ಗೆ ಗೆಳೆಯರು ಹಾಗೂ ಆತ್ಮೀಯರ ಜೊತೆ ಪಾರ್ಕ್ ನಲ್ಲಿ ನಡೆಸಿದರು. ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೈಸೂರಿನ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಆತ್ಮೀಯರ ಜೊತೆ ಮೈಸೂರಿನ ರಾಮಕೃಷ್ಣನಗರದ ಐ ಬ್ಲಾಕ್ ನಲ್ಲಿರುವ ಉದ್ಯಾನವನದಲ್ಲಿ ಚಳಿಯ ಮಧ್ಯೆಯೇ ವಾಕ್ ಮಾಡಿದರು. ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸ್ನೇಹಿತರೊಂದಿಗೆ ಕಾಲಕಳೆದ ಸಿದ್ದರಾಮಯ್ಯನವರು ವ್ಯಾಯಾಮ ಮಾಡಿ ದೇಹ ದಂಡಿಸಿದರು. ಈ ವೇಳೆ ತಮ್ಮ ಸ್ನೇಹಿತೊಂದಿಂಗೆ ನಗೆ ಚಟಾಕಿ ಹಾರಿಸುತ್ತಾ, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಪಾರ್ಕ್ ನಲ್ಲಿ ಸಿದ್ದರಾಮಯ್ಯ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಎಲ್ಲರಿಗೂ ಸಾವಧಾನಚಿತ್ತವಾಗಿ ವರ್ತಿಸಿದ ಸಿದ್ದರಾಮಯ್ಯ ತಾನೂ ಕೂಡ ಫೋಟೋ ಕ್ಲಿಕ್ಕಿಸಿಕೊಂಡು ಮನೆಯ ಕಡೆ ತೆರಳಿದರು. ಈ ವೇಳೆ ಕಾಂಗ್ರೆಸ್ ನ ಹಿರಿಯ ಮುಖಂಡ ಸೀತಾರಾಮ್ ಸಹ ಅವರೊಟ್ಟಿಗೆ ಭಾಗಿಯಾಗಿ ಕಾಲ ಕಳೆದರು.
from India & World News in Kannada | VK Polls https://ift.tt/3seZuQ2