ವಿದ್ಯಾರ್ಥಿಗಳಿಗೆ ಹೊರೆಯಾದ ಬಸ್‌ ಪಾಸ್‌..! 5ಜಿ ಯುಗದಲ್ಲೂ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಮೂರ್ನಾಲ್ಕು ದಿನ

ಶಾಲೆ, ಕಾಲೇಜುಗಳು ಬಹುತೇಕ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತಿರುವ ಹೊತ್ತಿಗೆ ವಿದ್ಯಾರ್ಥಿಗಳಿಗೆ ಪಡೆಯುವುದು ಚಕ್ರವ್ಯೂಹ ಪ್ರವೇಶದ ಅನುಭವ ನೀಡುತ್ತಿದೆ. ಕೊರೊನಾ ಕಾರಣದಿಂದ ಕಳೆದ ವರ್ಷ ಪಡೆದ ಬಸ್‌ ಪಾಸನ್ನೇ ಫೆಬ್ರವರಿ 28ರವರೆಗೆ ಬಳಸಲು ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಆವಕಾಶ ನೀಡಿದೆ. ಮಾರ್ಚ್ 1ರಿಂದ ಹೊಸ ಬಸ್‌ ಪಾಸ್‌ ಪಡೆದೇ ಸಂಚರಿಸಬೇಕಾಗಿದೆ. ಅದಕ್ಕಾಗಿ ತುರುಸಿನಲ್ಲಿರುವ ವಿದ್ಯಾರ್ಥಿಗಳಿಗೆ ಸರಕಾರದ ಹೊಸ ನಿಯಮ ತೊಡರುಗಾಲಾಗಿದೆ. ಇದುವರೆಗೆ ಬಸ್‌ ಪಾಸ್‌ಗಾಗಿ ಭರ್ತಿ ಮಾಡಿದ ಭೌತಿಕ ಅರ್ಜಿಗಳೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ತಮ್ಮ ಶಾಲಾ, ಕಾಲೇಜುಗಳ ಮುಖ್ಯಸ್ಥರ ಸಹಿ ಪಡೆದು ಪಾಸ್‌ ವಿತರಣಾ ಕೇಂದ್ರಗಳಿಗೆ ಸಲ್ಲಿಸಿದರೆ, ಕೂಡಲೇ ಪಾಸ್‌ ದೊರೆಯುತ್ತಿತ್ತು. ಆದರೆ, ಪ್ರಸಕ್ತ ಸಾಲಿನಿಂದ 'ಸೇವಾ ಸಿಂಧು' ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಸರಕಾರ ಕಡ್ಡಾಯ ಮಾಡಿದೆ. ಈ ಪೋರ್ಟಲ್‌ನಲ್ಲಿರುವ ತಾಂತ್ರಿಕ ಸಮಸ್ಯೆಯೂ ಸೇರಿ ಹಲವು ತೊಂದರೆಗಳಿಂದ ಹೈರಾಣಾಗಿದ್ದಾರೆ. ಸುಲಭವಾಗಿದ್ದ ವ್ಯವಸ್ಥೆಯನ್ನು ಇಷ್ಟೊಂದು ಗೋಜಲುಗೊಳಿಸಿದ್ದರ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶಿತರಾಗಿದ್ದು, ಹಳೆ ವ್ಯವಸ್ಥೆಯ ಮರುಜಾರಿಗೆ ಒತ್ತಾಯಿಸಿದ್ದಾರೆ. ಸಮಸ್ಯೆಗಳೇನು?
  • ಸರಳವಾಗಿ ಪಡೆಯಬಹುದಾಗಿದ್ದ ಪಾಸ್‌ ವ್ಯವಸ್ಥೆ ಗೊಂದಲದ ಗೂಡಾಗಿದೆ.
  • ಸೇವಾ ಸಿಂಧು ಪೋರ್ಟಲ್‌ನಲ್ಲೇ ತಾಂತ್ರಿಕ ತೊಂದರೆ ಇದೆ.
  • ಎಲ್ಲರಿಗೂ ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸುವ ವ್ಯವಸ್ಥೆ ಇಲ್ಲ.
  • ಚ್ಚಿನ ವಿದ್ಯಾರ್ಥಿಗಳು ಅರ್ಜಿ ತುಂಬಲು ಸೈಬರ್‌ ಕೆಫೆಯಲ್ಲಿ ಕಾಯುವುದು ಅನಿವಾರ್ಯವಾಗಿದೆ.
  • ಮೊದಲು 10 ನಿಮಿಷದಲ್ಲಿ ಆಗುತ್ತಿದ್ದರೆ ಈಗ ಮೂರ್ನಾಲ್ಕು ದಿನ ಬೇಕು.
ಪರಿಹಾರ ಹೇಗೆ? ದೋಷಪೂರಿತ ಆನ್‌ಲೈನ್‌ ಅರ್ಜಿ ಸಲ್ಲಿಕೆ ವ್ಯವಸ್ಥೆಯನ್ನು ರದ್ದುಪಡಿಸಿ ಹಿಂದಿನಂತೆಯೇ ಕಾಲೇಜಿನ ಅನುಮತಿ ಪಡೆದು ನೇರವಾಗಿ ಪಾಸ್‌ ಪಡೆಯಲು ಅವಕಾಶ ನೀಡಬೇಕು. ಹೆಚ್ಚುವರಿ ಶುಲ್ಕ ವಸೂಲಿ ಯಾಕೆ? ಮಾರ್ಚ್ ತಿಂಗಳಿನಿಂದ ಪಾಸ್‌ ನೀಡಿದರೂ 2020ರ ನವೆಂಬರ್‌ನಿಂದಲೇ ಪೂರ್ವಾನ್ವಯವಾಗಿ ಹತ್ತು ತಿಂಗಳ ಪಾಸ್‌ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಕಾಲೇಜುಗಳು ನವೆಂಬರ್‌ನಿಂದಲೇ ಆರಂಭವಾಗಿವೆ ಎಂಬ ನೆಪ ಒಡ್ಡಿ ಈ ವಸೂಲಿ ಮಾಡಲಾಗುತ್ತಿದೆ. ಆದರೆ, ಹಲವಾರು ಮಂದಿ ಇನ್ನೂ ಕಾಲೇಜಿಗೆ ಹೋಗಲು ಆರಂಭಿಸಿಯೇ ಇಲ್ಲ. ಹಾಗಿರುವಾಗ ಹೆಚ್ಚುವರಿ ಹಣ ಯಾಕೆ ಕೊಡಬೇಕು. ಮಾರ್ಚ್‌ನಿಂದಲೇ ಮುಂದಿನ 10 ತಿಂಗಳಿಗೆ ಪಾಸ್‌ ನೀಡಬಹುದಲ್ಲವೇ ಎನ್ನುವುದು ಪೋಷಕರ ವಾದ. ಆದರೆ, ಇದು ಸರಕಾರದ ಸೂಚನೆ ಎಂದು ಸಾರಿಗೆ ಇಲಾಖೆ ಹೇಳುತ್ತಿದೆ.


from India & World News in Kannada | VK Polls https://ift.tt/3uktQCE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...