ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿದ ಚೀನಿ ಸೈನಿಕರ ನಡೆ ಖಂಡಿಸಿ, ನೇತೃತ್ವದಲ್ಲಿ ನವದೆಹಲಿಯಲ್ಲಿರುವ ಮುಂದೆ ಭಾರೀ ನಡೆದಿದೆ. ಚೀನಾ ರಾಯಭಾರ ಕಚೇರಿ ಮುಂದೆ ಜಮಾವಣೆಗೊಂಡ ಜನ, ಚೀನಾ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಘೋಷಣೆ ಕೂಗಿದರು. ಗಡಿ ಘರ್ಷಣೆಗೆ ಚೀನಾದ ಆಕ್ರಮಣಕಾರಿ ನಿತಿಯೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗಡಿಯಲ್ಲಿ ಭಾರೀ ಪ್ರಮಾದ ಎಸಗಿರುವ ಚೀನಾಗೆ ಬುದ್ಧಿ ಕಲಿಸಲು ಚೀನಾ ವಸ್ತುಗಳ ಬಳಕೆಯನ್ನು ನಿಲ್ಲಿಸುವಂತೆ ಅಭಿಯಾನ ಆರಂಭಿಸಲಾಗಿದೆ. ಚೀನಾ ವಸ್ತುಗಳ ಆಮದನ್ನು ಕಡಿಮೆ ಮಾಡಿ ದೇಶೀಯವಾಗಿಯೇ ವಸ್ತುಗಳ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇನ್ನು ಸ್ವದೇಶಿ ಜಾಗರಣ್ ಮಂಚ್ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಗಡಿಯಲ್ಲಿ ಅಮಾನವೀಯ ವರ್ತನೆ ತೋರಿದ ಚೀನಾಗೆ ಬುದ್ಧಿ ಕಲಿಸಲು ಭಾರತ ಸಜ್ಜಾಗಿದ್ದು, ಈ ಬಾಋಇ ಸರ್ಕಾರ ಹಾಗೂ ಸಮಾಜ ಒಗ್ಗೂಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
from India & World News in Kannada | VK Polls https://ift.tt/2YCrLmE