ಲೇಹ್: ಲಡಾಖ್ ಗಡಿಯಲ್ಲಿ ಚೀನಿ ಸೈನಿಕರೊಂದಿಗೆ ನಡೆದ ಭೀಷಣ ಘರ್ಷಣೆಯಲ್ಲಿ ಹತರಾದ 20 ಭಾರತೀಯ ಸೈನಿಕರಿಗೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೇಹ್‌ನ ಸೇನಾ ಆಸ್ಪತ್ರೆ ಮುಂದೆ ಹುತಾತ್ಮರಿಗೆ ಭಾರತೀಯ ಸೇನೆ ಗೌರವ ವಂದನೆ ಸಲ್ಲಿಸುವ ಮೂಲಕ ಅಗಲಿದ ಸಹೋದ್ಯೋಗಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೇಹ್‌ನ ಸೇನಾ ಆಸ್ಪತ್ರೆಯಿಂದ 20 ಹುತಾತ್ಮರ ಕಳೆಬರಹ ಅವರವರ ತವರಿಗೆ ತೆರಳಲಿದ್ದು, ಅದಕ್ಕೂ ಮೊದಲು ಸೇನೆ ವತಿಯಿಂದ ವೀರ ಯೋಧರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಲಡಾಖ್‌ನಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಭೀಷಣ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಸೇರಿದಂತೆ ಒಟ್ಟು 20 ವೀರ ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/2AyJx2h