ಲಡಾಖ್ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅಮೆರಿಕದ ಶ್ರದ್ಧಾಂಜಲಿ!

ವಾಷಿಂಗ್ಟನ್: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಭೀಕರ ಹಿಂಸಾತ್ಮಕ ಘರ್ಷಣೆಗೆ ತೀವ್ರ ಖೇದ ವ್ಯಕ್ತಪಡಿಸಿದೆ. ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅಮೆರಿಕ ಶ್ರದ್ಧಾಂಜಲಿ ಸಲ್ಲಿಸಿದೆ. ಈ ಕುರಿತು ಮಾತನಾಡಿರುವ ಅಮೆರಿಕದ ಕಾರ್ಯದರ್ಶಿ ಮೈಕ್ ಪಾಂಪಿಯೋ, ಗಲ್ವಾನ್ ಘರ್ಷಣೆಯಲ್ಲಿ ಹತರಾದ ಭಾರತೀಯ ಯೋಧರಿಗೆ ಅಮೆರಿಕ ಶ್ರದ್ಧಾಂಜಲಿ ಸಲ್ಲಿಸುತ್ತದೆ ಎಂದು ಹೇಳಿದ್ದಾರೆ. ಗಲ್ವಾನ್ ಘರ್ಷಣೆ ಅತ್ಯಂತ ದುರದೃಷ್ಟಕರ ಎಂದಿರುವ ಮೈಕ್ ಪಾಂಪಿಯೋ, ದೇಶ ರಕ್ಷಣೆಗಾಗಿ ಪ್ರಾಣ ತೆತ್ತ ಭಾರತೀಯ ಯೋಧರ ಬಲಿದಾನವನ್ನು ಅಮೆರಿಕ ಗೌರವಿಸುತ್ತದೆ ಎಂದು ಹೇಳಿದ್ದಾರೆ. ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಕ್ಕೆ ಅಮೆರಿಕ ಸಾಂತ್ವನ ಹೇಳುತ್ತದೆ ಎಂದಿರುವ ಮೈಕ್ ಪಾಂಪಿಯೋ, ಈ ಗಡಿ ಘರ್ಷಣೆಯ ಗಾಯ ಬಹಳ ದಿನಗಳವರೆಗೆ ಮಾಸದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಶ್ಚರ್ಯವೆಂದರೆ ಚೀನಾದ ರಾಜತಾಂತ್ರಿಕ ಅಧಿಕಾರಿ ಯಾಂಗ್ ಜೈಚಿ ಅವರನ್ನು ಭೇಟಿಯಾದ ಬಳಿಕ ಮೈಕ್ ಪಾಂಪಿಯೋ ಈ ಟ್ವೀಟ್ ಮಾಡಿದ್ದು, ಭಾರತ-ಚೀನಾ ಗಡಿ ತಕರಾರಿನಲ್ಲಿ ಅಮೆರಿಕ ಭಾರತದ ಪರ ನಿಲುವು ಹೊಂದಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ಚೀನಾಗೆ ರವಾನಿಸಿದ್ದಾರೆ.


from India & World News in Kannada | VK Polls https://ift.tt/30T8UXf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...