ಬೆಂಗಳೂರು: ಸದ್ಯದ ಹಣಕಾಸು ಸ್ಥಿತಿ ಆಧರಿಸಿ ಕರ್ನಾಟಕ ಮೂಲದ ಡೆಕ್ಕನ್ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್ ಹೊಸದಾಗಿ ಸಾಲ ನೀಡುವುದು ಅಥವಾ ಠೇವಣಿಗಳನ್ನು ಸ್ವೀಕರಿಸುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸಿದೆ. ಅಲ್ಲದೆ ಸೇವಿಂಗ್ ಅಕೌಂಟ್ ಹಾಗೂ ಕರೆಂಟ್ ಅಕೌಂಟ್‌ಗಳಿಂದ ಆರು ತಿಂಗಳ ಕಾಲ ಗ್ರಾಹಕರು ₹1,000ಕ್ಕಿಂತ ಹೆಚ್ಚು ಹಣವನ್ನು ಪಡೆಯದಂತೆ ಸೂಚನೆ ನೀಡಲಾಗಿದೆ. ಮೂಲದ ಬ್ಯಾಂಕ್ ಇದಾಗಿದ್ದು, ಪರವಾನಗಿ ಇಲ್ಲದೆಯೇ ಬ್ಯಾಂಕ್ ಹೊಸದಾಗಿ ಯಾವುದೇ ರೀತಿಯ ಹೂಡಿಕೆಗಳನ್ನು ಮಾಡುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ತನ್ನ ಆದೇಶದಲ್ಲಿ ತಿಳಿಸಿದೆ. ಹಣಕಾಸು ಪರಿಸ್ಥಿತಿ ಸುಧಾರಿಸುವವರೆಗೆ ಈ ಕ್ರಮಗಳು ಮುಂದುವರಿಯಲಿವೆ. ಈ ನಿರ್ಬಂಧಗಳ ನಡುವೆಯೂ ಬ್ಯಾಂಕ್ ಎಂದಿನಂತೆ ವಹಿವಾಟು ನಡೆಸಬಹುದು. ಮುಂದಿನ ಪರಿಸ್ಥಿತಿಗಳನ್ನು ಪರಿಶೀಲಿಸಿ ಈ ನಿರ್ಬಂಧಗಳನ್ನು ಮಾರ್ಪಾಡು ಮಾಡಬಹುದು ಎಂದು ತಿಳಿಸಿದೆ. ಇನ್ನು ಫೆಬ್ರವರಿ 19ರಿಂದ ಈ ನಿರ್ಬಂಧ ಹೇರಲಾಗಿದೆ. ಇನ್ನುಆರ್‌ಬಿಐ ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ತನ್ನ ಬಾಧ್ಯತೆಗಳನ್ನು ಹೊರಹಾಕುವಲ್ಲಿ ಯಾವುದೇ ಪಾವತಿಯನ್ನು ವಿತರಿಸದಂತೆ, ಆಸ್ತಿಗಳನ್ನು ಮಾರಾಟ ಮಾಡದಂತೆ, ಠೇವಣಿಗಳನ್ನು ಸ್ವೀಕರಿಸದಂತೆ ತಿಳಿಸಿದೆ. ಇನ್ನು ಗ್ರಾಹಕರು ಆರ್‌ಬಿಐನ ಪೂರ್ವಾನುಮತಿಯೊಂದಿಗೆ ಮಾತ್ರ ಹೊಸ ಸಾಲ ಮತ್ತು ಠೇವಣಿಗಳನ್ನು ಪಡೆಯಬಹುದು ಎಂದು ಕೂಡ ಆರ್‌ಬಿಐ ತನ್ನ ನಿರ್ದೇಶನದಲ್ಲಿ ತಿಳಿಸಿದೆ.
from India & World News in Kannada | VK Polls https://ift.tt/2NqK4JZ