ಮದುವೆಗೆ ಸಿಲಿಂಡರ್‌, ಪೆಟ್ರೋಲ್‌, ಈರುಳ್ಳಿ ಹಾರ ಗಿಫ್ಟ್‌: ಇದಕ್ಕಿಂತ ದುಬಾರಿ ಗಿಫ್ಟ್‌ ಇಲ್ಲ ಎಂದು ಕಾಳೆಲೆದ ನೆಟ್ಟಿಗರು.

ಚೆನ್ನೈ: ಚಿನ್ನ, ಬೆಳ್ಳಿ, ವಜ್ರ ಶ್ರೀ ಸಾಮನ್ಯರಿಗೆ, ಬಡಿವರಿಗೆ ಕೈಗೆಟುಕದ ವಸ್ತುಗಳೇ ಸರಿ. ಇದರ ಜತೆಗೆ ಇದೀಗ ದೈನದಿಂದ ವಸ್ತುಗಳ ಬೆಲೆ ಏರಿಕೆ ಕೂಡ ಸಾಮಾನ್ಯರನ್ನು ಹೈರಾಣಾಗಿಸಿದೆ. ಅಲ್ಲದೇ ಪೆಟ್ರೋಲ್,‌ ಡೀಸೆಲ್‌, ದರ ಕೂಡ ಗಗನ ಮುಟ್ಟಿದ್ದು, ಜನರ ಜೇಬು ಸುಡುತ್ತಿದೆ. ಬೆಲೆ ಏರಿಕೆ ಹಾಗೂ ಹಣದುಬ್ಬರ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ತಮಿಳುನಾಡಿನ ಮದುವೆಯೊಂದರಲ್ಲಿ ವಿಶೇಷವಾಗಿ ಇದರ ವಿರುದ್ಧ ಪ್ರತಿಭಟಿಸಲಾಗಿದೆ. ವ್ಯಕ್ತಿಯೊಬ್ಬರ ಮದುವೆಗೆ ಅವರ ಸ್ನೇಹಿತರು, ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌ ತುಂಬಿದ ಕ್ಯಾನ್‌ ಹಾಗೂ ಈರುಳ್ಳಿಯಿಂದ ಮಾಡಿದ ಹಾರ ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ತಮ್ಮ ಗೆಳೆಯನ ಮದುವೆಗೆ ಭಾರೀ 'ದುಬಾರಿ' ಉಡುಗೊರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದು, ಈ ಹೊಸ ಐಡಿಯಾ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಗಳಿಸಿದೆ. ಕಾರ್ತಿಕ್‌ ಹಾಗೂ ಶರಣ್ಯ ಎಂಬ ಜೋಡಿಗಳ ವಿವಾಗ ಸಮಾರಂಭ ಇದಾಗಿದ್ದು, ಸ್ನೇಹಿತರು ಈ ದುಬಾರಿ ಗಿಫ್ಟ್‌ ನೀಡುವ ಮೂಲಕ ವಧು-ವವರ ವಿವಾಹ ಸ್ಮರಣೀಯವಾಗಿಸಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ಅಲ್ಲದೇ ಪೆಟ್ರೋಲ್‌ ಕ್ಯಾನ್‌ ಅನ್ನು ಜೋಡಿಗಳು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಪೋಸು ನೀಡಿದ್ದಾರೆ. ನೆಟ್ಟಿಗಂತೂ ಈ ವಿಡಿಯೋಗೆ ಚಿತ್ರ ವಿಚಿತ್ರ ಕಮೆಂಟುಗಳನ್ನು ಹರಿಯ ಬಿಟ್ಟಿದ್ದಾರೆ. ಸಾವಿರಾರು ಮಂದಿ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ವೀಕ್ಷಿಸಿದ್ದಾರೆ. ಇದು ಬೆಲೆ ಕಟ್ಟಲಾಗದ ಉಡುಗೊರೆ ಎಂದು ನೆಟ್ಟಿಗರೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.


from India & World News in Kannada | VK Polls https://ift.tt/3dEkyvD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...