ಜಮ್ಮು-ಕಾಶ್ಮೀರ: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, ಗಡಿ ಕಾಯುತ್ತಿದ್ದ ಯೋಧ ಹುತಾತ್ಮ!

ಜಮ್ಮಿ-ಕಾಶ್ಮೀರ: ಬುಧವಾರ ರಾತ್ರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಇದರ ಪರಿಣಾಮ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ನಿನ್ನೆ ರಾತ್ರಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಇದರಿಂದಾಗಿ ಗಡಿ ಕಾಯುವ ಸೇವೆಯಲ್ಲಿದ್ದ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಮ್ಮುವಿನ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತವು ಗುಂಡಿನ ಮೂಲಕವೇ ಉತ್ತರ ನೀಡಿದೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನದ ಹಿಂದೆ ಪಾಕಿಸ್ತಾನದ ಸೇನೆ ಕದನ ವಿರಾಮ ಉಲ್ಲಂಘಿಸಿತ್ತು. ಮೂಲಗಳ ಪ್ರಕಾರ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರ ಚಿತ್ತವನ್ನು ಬೇರೆಡೆ ಸೆಳೆದು ಪಾಕ್‌ ಪೋಷಿತ ಉಗ್ರರನ್ನು ದೇಶದೊಳಗೆ ನುಗ್ಗಿಸುವ ತಂತ್ರದಲ್ಲಿ ತೊಡಗಿದೆಯಂತೆ. ಇದಕ್ಕಾಗಿಯೇ ಬೇಕು ಬೇಕು ಅಂತಲೇ ಕದನ ವಿರಾಮ ಉಲ್ಲಂಘಿಸುತ್ತಿದೆ. ಸದ್ಯ ಭಾರತೀಯ ಯೋಧರು ಉಗ್ರರಿಗೆ ಒಳನುಸುಳಲು ಅವಕಾಶ ಕೊಡುತ್ತಿಲ್ಲ. ಈ ಹಿಂದೆ ತಕ್ಕ ವಾರ್ನಿಂಗ್‌ ಕೊಟ್ಟ ಹಿನ್ನೆಲೆ ಪಾಕ್‌ ಸೇನೆ ತನ್ನ ಆಟೋಟೋಪಗಳನ್ನು ನಿಲ್ಲಿಸಿತ್ತು. ಯಾವುದೇ ಕದನ ವಿರಾಮ ಉಲ್ಲಂಘಿಸುತ್ತಿರಲಿಲ್ಲ. ಇದೀಗ ಮತ್ತೆ ತನ್ನ ದುಷ್ಕೃತ್ಯಕ್ಕೆ ಮುಂದಾಗಿದೆ.


from India & World News in Kannada | VK Polls https://ift.tt/2SbCgdO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...