ಕೊರೊನಾ ಮಧ್ಯೆ ಡೆಂಗ್ಯೂ , ಚಿಕೂನ್‌ ಗುನ್ಯಾ ರೋಗಗಳು: ಸದ್ದಿಲ್ಲದೆ ಶುರುವಾಗಿದೆ ಅಪಾಯದ ಕರೆಗಂಟೆ!

ಮನುಕುಮಾರ್‌ ಎಚ್‌ ಕೆ. ದೊಡ್ಡಬಳ್ಳಾಪುರ ಗ್ರಾಮಾಂತರ ದೊಡ್ಡಬಳ್ಳಾಪುರ: ಆರೋಗ್ಯ ಇಲಾಖೆಯು ಆಶಾಕಾರ್ಯಕರ್ತೆಯರ ಮೂಲಕ ಮನೆ ಮನೆ ಸರ್ವೇ ಮಾಡಿಸುತ್ತಿದ್ದು, ಕೊರೊನಾ ಜತೆಗೆ , ಮಲೇರಿಯಾ, ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ 3,36,601 ಮನೆಗಳ ಸರ್ವೆ ನಡೆಸಿದ್ದು, 6,612 ಮನೆಗಳಲ್ಲಿ ಸೊಳ್ಳೆಗಳ ಲಾರ್ವ ಕಂಡುಬಂದಿದೆ. ಅಂದಾಜು 100 ಮನೆಗಳ ಪೈಕಿ ಶೇ.1.96 ರಷ್ಟು ಮನೆಗಳಲ್ಲಿ ಲಾರ್ವ ಕಂಡುಬರುತ್ತಿದೆ. ಪಂಚಾಯಿತಿಗಳ ನಿರ್ಲಕ್ಷ್ಯ ಪಂಚಾಯಿತಿಗಳು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. ಚರಂಡಿಗಳಲ್ಲಿನ ಕಸವನ್ನು ತೆಗೆಯುವುದು, ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಳೆಯಿಂದ ನಿಂತ ನೀರು ಕೃಷಿ ಇಲಾಖೆಯ ಪ್ರಕಾರ, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ಲಾಸ್ಟಿಕ್‌ ಕವರ್‌ಗಳ ಮೇಲೆ, ತೆಂಗಿನ ಚಿಪ್ಪುಗಳಲ್ಲಿ, ಸಣ್ಣ ಸಣ್ಣ ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳು ಮೊಟ್ಟೆಯಿಟ್ಟು ತಮ್ಮ ಸಂತತಿಯನ್ನು ಹೆಚ್ಚಿಸುತ್ತಿವೆ. ಜನರು ಸೊಳ್ಳೆ ಕಡಿತದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೆಚ್ಚು ಜ್ವರ, ಸುಸ್ತು, ವಾಂತಿ, ಅತೀವ ಮೈ ಕೈ ನೋವು, ಸಂಧಿವಾತ, ಕೀಲು ನೋವು ಲಕ್ಷಣಗಳಿರುವ ಡೆಂಗೆ, ಚಿಕೂನ್‌ ಗುನ್ಯದಿಂದ ಬಳಲುತ್ತಿರುವವರು ಒಂದು ರೀತಿಯ ಅಂಗವೈಕಲ್ಯ ಅನ್ನಿಸುತ್ತದೆ ಎನ್ನುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕೊರೊನಾ ಹತೋಟಿಗೆ ಮಾತ್ರ ಕೆಲಸ ಮಾಡುತ್ತಿದ್ದು, ಬೇರೆ ರೋಗಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬರೀ ಕೊರೋನ ನಿರ್ವಹಣೆ ಎಂದು ಕಾರಣ ಹೇಳದೇ ಅಧಿಕಾರಿಗಳು ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮ ನೈರ್ಮಲ್ಯದ ಕಡೆಗೂ ಗಮನ ಹರಿಸಬೇಕು. ಸಾಂಕ್ರಾಮಿಕ ರೋಗಗಳಿಂದಲೂ ಜನರ ಜೀವಕ್ಕೆ ಕುತ್ತು ಬರುತ್ತಿದ್ದು, ಬೇರೆ ರೋಗಗಳ ಬಗ್ಗೆಯೂ ಅಧಿಕಾರಿಗಳು ಗಮನಹರಿಸಬೇಕಿದೆ. ಜನರು ಸ್ವಚ್ಛತೆಯನ್ನು ಕಾಪಾಡಿಕೊಳುವುದರ ಜತೆಗೆ ಮನೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಯಬೇಕಿದೆ. ಕನ್ಯಾಕುಮಾರಿ ಶ್ರೀನಿವಾಸ್‌, ಉಪಾಧ್ಯಕ್ಷರು ಜಿಲ್ಲಾಪಂಚಾಯಿತಿ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲಾ ಅಧಿಕಾರಿಗಳಿಗೂ ಮಾರ್ಗದರ್ಶನ ನೀಡಲಾಗಿದೆ. ಜನರು ಸ್ವಚ್ಛತೆಯನ್ನು ಕಾಪಾಡಿಕೊಂಡು ರೋಗಗಳಿಂದ ದೂರ ಇರಬೇಕು. ಧರ್ಮೇಂದ್ರ, ಡಿಎಂಒ, ಆರೋಗ್ಯ ಇಲಾಖೆ.


from India & World News in Kannada | VK Polls https://ift.tt/35D1LLf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...