ಚಂದ್ರನಲ್ಲಿದೆ ಅಗಾಧ ಜಲ ಸಂಪತ್ತು..! ನಾಸಾದ ಸಂಶೋಧನೆಯಲ್ಲಿ ಬಹಿರಂಗ

ಪ್ಯಾರಿಸ್‌: ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಹಲವು ಅಧ್ಯಯನಗಳು ಚಂದ್ರನ ಮೇಲೆ ನೀರಿದೆ ಎಂದು ಈಗಾಗಲೇ ಹೇಳಿವೆ. ಆದರೆ, ಸೋಮವಾರ ಪ್ರಕಟವಾದ ಎರಡು ಸಂಶೋಧನೆಗಳು ಚಂದ್ರನ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಇರಬಹುದು ಎಂದು ತಿಳಿಸಿವೆ. ಭವಿಷ್ಯದಲ್ಲಿ ಬಾಹ್ಯಾಕಾಶಯಾನಿಗಳು ಚಂದ್ರನ ಮೇಲೆ ನೀರು ಅಥವಾ ಇಂಧನವನ್ನು ಪಡೆಯಬಹುದು ಎಂದು ತಿಳಿಸಿದೆ. ದಶಕದ ಚಂದ್ರನ ಮೇಲೆ ನೀರಿನ ಕುರುಹುಗಳಿವೆ ಎಂಬುದನ್ನು ಸರಣಿ ಸಂಶೋಧನೆಗಳು ತಿಳಿಸುವವರೆಗೂ ಚಂದ್ರನಲ್ಲಿ ನೀರಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಈಗ ಯತೇಚ್ಛ ನೀರಿನ ಅಂಶ ಇದೆ ಎಂದು ಹೇಳಲಾಗುತ್ತಿದೆ. ನೇಚರ್ ಅಸ್ಟ್ರೋನಮಿಯಲ್ಲಿ ಸೋಮವಾರ ಪ್ರಕಟವಾದ ಎರಡು ಹೊಸ ಅಧ್ಯಯನಗಳು ಚಂದ್ರನ ಧ್ರುವ ಪ್ರದೇಶಗಳಲ್ಲಿ ಅಂದರೆ, ಶಾಶ್ವತವಾಗಿ ನೆರಳು ಇರುವ ಕೋಲ್ಡ್‌ ಟ್ರ್ಯಾಪ್ಸ್‌ಗಳಲ್ಲಿ ಸಂಗ್ರಹವಾಗಿರುವ ಐಸ್ ಸೇರಿ, ಈ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚಿನ ನೀರು ಇರಬಹುದು ಎಂದು ತಿಳಿಸಿವೆ. ಹಿಂದಿನ ಸಂಶೋಧನೆ ಚಂದ್ರನ ಮೇಲ್ಮೈ ಸ್ಕ್ಯಾನ್ ಮಾಡುವ ಮೂಲಕ ನೀರಿನ ಕುರುಹುಗಳನ್ನು ಕಂಡುಹಿಡಿದಿತ್ತು. ಆದರೆ, ನೀರು (H2O) ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ, ಹೊಸ ಅಧ್ಯಯನ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿಯೂ ನೀರಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಒದಗಿಸುತ್ತದೆ. ನಾಸಾದ ವಿಜ್ಞಾನಿಗಳು ಸೋಫಿಯಾ ಏರ್‌ಬೋನ್‌ ಟೆಲೆಸ್ಕೋಪ್‌ ದತ್ತಾಂಶ ಬಳಸಿಕೊಂಡು ಚಂದ್ರನ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ನೀರಿದೆ ಎಂದು ಹೇಳಿದ್ದಾರೆ. ನೀರು ಗಾಜಿನ ಮಣಿಗಳಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಅಥವಾ ಚಂದ್ರನ ಕಠಿಣ ವಾತಾವರಣದಿಂದ ಅದನ್ನು ರಕ್ಷಿಸುವ ಮತ್ತೊಂದು ವಸ್ತುವಿನಲ್ಲಿ ಸಿಲುಕಿರಬಹುದು ಎಂದು ಸಂಶೋಧಕರು ನಂಬಿದ್ದಾರೆ. ಹೆಚ್ಚಿನ ಸಂಶೋಧನೆ ನಡೆಸಿದರೆ ನೀರು ಎಲ್ಲಿಂದ ಬಂದಿರಬಹುದು ಮತ್ತು ಅದು ಹೇಗೆ ಸಂಗ್ರಹವಾಗಿದೆ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹವಾಯಿ ಇನ್‌ಸ್ಟಿಟ್ಯೂಟ್‌ ಆಫ್‌ ಜಿಯೋಫಿಸಿಕ್ಸ್‌ ಮತ್ತು ಪ್ಲಾನೆಟಾಲಜಿಯ ಕ್ಯಾಸಿ ಹೊನ್ನಿಬಾಲ್‌ ಹೇಳಿದ್ದಾರೆ. ಚಂದ್ರನ ಕೆಲವು ಸ್ಥಳಗಳಲ್ಲಿ ನೀರು ಹೇರಳವಾಗಿದೆ ಎಂಬುದನ್ನು ನಾವು ಕಂಡುಕೊಂಡರೆ ಅದನ್ನು ಮಾನವನ ಸಂಶೋಧನೆಗೆ ಬಳಸಬಹುದು ಎಂದು ಹೇಳಿರುವ ಹೊನ್ನಿಬಾಲ್, ಅದನ್ನು ಕುಡಿಯುವ ನೀರು, ಉಸಿರಾಡುವ ಆಮ್ಲಜನಕ ಮತ್ತು ರಾಕೆಟ್ ಇಂಧನವಾಗಿಯೂ ಬಳಸಬಹುದು ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/2TsbFK3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...