ಏರಿದ ಎಲೆಕೋಸು, ಹೂಕೋಸು: ಇಳಿದ ಈರುಳ್ಳಿ ಬೆಲೆ, ಇಲ್ಲಿದೆ ತರಕಾರಿ ದರಪಟ್ಟಿ

ಬೆಂಗಳೂರು: ಎಲೆಕೋಸು, ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ಕೆ.ಜಿ. ಎಲೆಕೋಸಿಗೆ ಗರಿಷ್ಠ ಎಂದರೆ 30 ರೂ. ಇರುತ್ತಿತ್ತು. ಆದರೆ ಇದೀಗ 60 ರೂ. ದಾಟಿದೆ. ಹೂಕೋಸು ಕೂಡ ಒಂದಕ್ಕೆ 40 ರೂ. ಮುಟ್ಟಿದ್ದು, ಗೋಬಿಮಂಚೂರಿ ಪ್ರಿಯರಿಗೆ ನಿರಾಸೆಯಾಗಿದೆ. ಸಾಮಾನ್ಯವಾಗಿ ಹೂಕೋಸು, ಬೆಳೆಗೆ ಹುಳಗಳ ಬಾಧೆ ಹೆಚ್ಚು. ಹೀಗಾಗಿ ರೈತರು ನಿರಂತರವಾಗಿ ಔಷಧಿ ಹೊಡೆಯಬೇಕು. ಆದರೆ ಇದೀಗ ಮಳೆಯಿಂದಾಗಿ ಔಷಧಿ ಹೊಡೆದರೂ ಅದು ನಿಲ್ಲುವುದಿಲ್ಲ. ಹೀಗಾಗಿ ಹುಳಗಳ ಬಾಧೆ ಹೆಚ್ಚಾಗಿದೆ. ಜತೆಗೆ ಮಳೆಯಿಂದಾಗಿ ಬೆಳೆ ಹಾಳಾಗಿದ್ದು, ಎಲೆಕೋಸು, ಹೂಕೋಸು ಕೊಳೆಯಲಾರಂಭಿಸಿದೆ. ಸಗಟು ದರದಲ್ಲಿ ಎರಡರ ದರವೂ 40 ರೂ.ಇದೆ ಎಂದು ದಾಸನಪುರ ಉಪ ಮಾರುಕಟ್ಟೆಯ ಫೋರ್‌ಸ್ಟಾರ್‌ ಮಳಿಗೆಯ ಸಗಟು ವ್ಯಾಪಾರಿ ಪ್ರಕಾಶ್‌ ತಿಳಿಸಿದರು. ದುಬಾರಿಯಾದ ಸಾಂಬಾರ್‌ ಸಾಂಬಾರ್‌ ಈರುಳ್ಳಿ ಹೆಚ್ಚು ರುಚಿಯಾಗಿದ್ದು, ಇದಕ್ಕೆ ತುಂಬಾ ಬೇಡಿಕೆಯಿದೆ. ಈ ತಳಿಯ ಈರುಳ್ಳಿ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದು, ಮಳೆಯಿಂದಾಗಿ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಹೀಗಾಗಿ ಕೆ.ಜಿ.ಗೆ 120 ರೂ.ನಂತೆ ಮಾರಲಾಗುತ್ತಿದೆ. ಈರುಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ ದಾಸ್ತಾನು ಮಾಡಲಾಗಿದ್ದ ಈರುಳ್ಳಿಯನ್ನು ಮಾರುಕಟ್ಟೆಗೆ ತರಿಸಿರುವ ಪರಿಣಾಮ ಸಗಟು ದರದಲ್ಲಿ ಈರುಳ್ಳಿ ದರ ಶೇ. 50 ರಷ್ಟು ಇಳಿಕೆಯಾಗಿದೆ. ಕಳೆದ ವಾರ ಗುಣಮಟ್ಟದ ಈರುಳ್ಳಿ ಸಗಟು ದರದಲ್ಲಿ ಕೆ.ಜಿ.ಗೆ 90 ರೂ. ಇತ್ತು. ಇದೀಗ ಆ ದರ 60 ರೂ.ಗೆ ಇಳಿದಿದೆ. ಅಲ್ಲದೆ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಸೋಮವಾರ ರಜೆ ಇದ್ದುದರಿಂದ ಎಪಿಎಂಸಿ ಮಾರುಕಟ್ಟೆಯನ್ನೂ ತೆರೆದಿರಲಿಲ್ಲ. ಹೀಗಾಗಿ ಮಂಗಳವಾರ ಒಮ್ಮೆಲೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುವ ಸಾಧ್ಯತೆಯಿದ್ದು, ಬೆಲೆಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಸಗಟು ವರ್ತಕರು ಹೇಳಿದ್ದಾರೆ. ಆದರೆ ಚಿಲ್ಲರೆ ಮಾರಾಟಗಾರರು ಎರಡು ಮತ್ತು ಮೂರನೇ ದರ್ಜೆಯ ಈರುಳ್ಳಿಯನ್ನು ತಂದು ದುಬಾರಿ ಬೆಲೆಗೆ ಮಾರುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಹಾಪ್‌ ಕಾಮ್ಸ್ ನಲ್ಲಿ ಕೂಡ ಇದೇ ರೀತಿ ಈರುಳ್ಳಿಯನ್ನು ಕೆ.ಜಿ.ಗೆ 102 ರೂ. ನಂತೆ ಮಾರುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ. ಬೀನ್ಸ್ ಇಳಿಕೆ, ನುಗ್ಗೆ-ಕ್ಯಾರೆಟ್‌ ಹೊರೆ ಬೀನ್ಸ್ ದರ ಕೆ.ಜಿ.ಗೆ 50-60 ರೂ. ಇದ್ದು, ಇದರ ಕಳೆದ ಒಂದು ತಿಂಗಳಿನಿಂದ ಸ್ಥಿರವಾಗಿಯೇ ಇದೆ. ಆದರೆ ಕ್ಯಾರಟ್‌, ನುಗ್ಗೆಕಾಯಿ, ಆಲೂಗಡ್ಡೆ ಸೇರಿದಂತೆ ಕೆಲವು ತರಕಾರಿಗಳ ದರದಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ಹಾಪ್‌ಕಾಮ್ಸ್ ನಲ್ಲಿ (ಕೆ.ಜಿ.ಗಳಲ್ಲಿ)
  • ಬೀನ್ಸ್‌ - 46 ರೂ.
  • ಬಿಳಿ/ಗುಂಡು ಬದನೆ-41 ರೂ.
  • ಬೀಟ್‌ರೂಟ್‌-58 ರೂ.
  • ದಪ್ಪ ಮೆಣಸಿನಕಾಯಿ-63 ರೂ.
  • ಊಟಿ ಕ್ಯಾರಟ್‌-128 ರೂ.
  • ನಾಟಿ ಕ್ಯಾರಟ್‌- 110 ರೂ.
  • ಎಲೆಕೋಸು - 62 ರೂ.
  • ಹೂಕೋಸು- 46 ರೂ.
  • ನುಗ್ಗೆಕಾಯಿ-98 ರೂ.
  • ಬೆಂಡೆಕಾಯಿ -44 ರೂ.
  • ಸಾಂಬಾರ್‌ ಈರುಳ್ಳಿ-114 ರೂ.
  • ಬಟಾಣಿ -280 ರೂ.
  • ಆಲೂಗಡ್ಡೆ -62 ರೂ.
  • ಟೊಮೇಟೊ -33 ರೂ.
  • ಮೆಂತ್ಯ ಸೊಪ್ಪು-95 ರೂ.
  • ಕೊತ್ತಂಬರಿ ಸೊಪ್ಪು-54 ರೂ.
  • ಸಬ್ಬಕ್ಕಿ ಸೊಪ್ಪು-72 ರೂ.
  • ಹರಿವೆ ಸೊಪ್ಪು-44 ರೂ.
  • ಏಲಕ್ಕಿ ಬಾಳೆಹಣ್ಣು -72 ರೂ.


from India & World News in Kannada | VK Polls https://ift.tt/2TuCQE2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...