ಶಾರ್ಜಾ: ಸೋಮವಾರ ರಾತ್ರಿ ವಿರುದ್ಧ ಎಂಟು ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಮಾತನಾಡಿದ ಪಂಜಾಬ್‌ನ , ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಅವರನ್ನು ಶ್ಲಾಘಿಸಿದರು. ಅವರೊಬ್ಬ ಟಿ20 ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಆಟಗಾರ ಎಂದು ಕರೆದರು. ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 150 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮಂದೀಪ್ ಸಿಂಗ್ ಹಾಗೂ ಕ್ರಿಸ್ ಗೇಲ್ ಕ್ರಮವಾಗಿ 66 ಮತ್ತು 51 ರನ್‌ಗಳನ್ನು ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂದೀಪ್, "ಅವರು ಕ್ರಿಕೆಟ್‌ಗೆ ನಿವೃತ್ತಿ ಪಡೆಯುವುದಿಲ್ಲ. ಅವರು ಯಾವಾಗಲೂ ಆಟದೊಂದಿಗೆ ಅದ್ಭುತವಾಗದ್ದಾರೆ. ಅವರು ಟಿ20 ಕ್ರಿಕೆಟ್‌ನ ಶ್ರೇಷ್ಠ ಆಟಗಾರ," ಎಂದು ಹೇಳಿದರು. ಕೆಕೆಆರ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ, ಟಿ20 ಕ್ರಿಕೆಟ್‌ಗೆ ನಿವೃತ್ತಿ ಪಡೆಯಬೇಡಿ ಎಂದು ಯುವ ಬ್ಯಾಟ್ಸ್‌ಮನ್ ಹೇಳಿದ್ದ ಅಂಶವನ್ನು ಕ್ರಿಸ್ ಗೇಲ್ ಬಹಿರಂಗಪಡಿಸಿದ್ದರು. "ನಿರ್ಣಾಯಕ ಪಂದ್ಯಗಳಲ್ಲಿ ಹಿರಿಯ ಆಟಗಾರರು ಆಡಲೇಬೇಕು ಎಂದು ಇಂದು(ಸೋಮವಾರ) ಕೋಚ್‌ಗಳು ಹೇಳಿದ್ದರು. ಅದರಂತೆ ತಂಡದ ಗೆಲುವಿಗೆ ನೆರವಾಗಿರುವುದು ತುಂಬಾ ಖುಷಿ ನೀಡಿದೆ. ತಂಡದ ಯುವ ಆಟಗಾರರು ಟಿ20 ಕ್ರಿಕೆಟ್‌ಗೆ ನಿವೃತ್ತಿ ಪಡೆಯಬೇಡಿ ಎಂದು ಹೇಳುತ್ತಿದ್ದರು," ಎಂದು ಗೇಲ್ ಪಂದ್ಯದ ಬಳಿಕ ಹೇಳಿದರು. ಈ ಗೆಲುವಿನೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಪ್ರಸ್ತುತ ತಂಡದ ಲಯದ ಬಗ್ಗೆ ಮಾತನಾಡಿದ ಸಿಂಗ್, "ಕಳೆದ ಕೆಲವು ಪಂದ್ಯಗಳಲ್ಲಿ ನಾವು ತೋರಿಸಿದ ಆತ್ಮ ವಿಶ್ವಾಸವೆಂದರೆ, ಪ್ರತಿ ಪಂದ್ಯದಲ್ಲೂ ಆ ಪಂಜಾಬಿ ಹೋರಾಟವನ್ನು ನಾವು ಉಳಿಸಿಕೊಳ್ಳಬೇಕಾಗಿಲ್ಲ. ಆಟಗಳು ನಮ್ಮ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ," ಎಂದು ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2G7Nvle