ಪುರುಷೋತ್ತಮ್ ಶ್ಯಾನುಬೋಗ್ ನಿಟ್ಟೂರು () ಶಿವಮೊಗ್ಗ: ತಾಲೂಕಿನ ಹೊಸನಗರ, ರಿಪ್ಪನ್‌ಪೇಟೆ, ಹುಂಚ, ರಾಮಚಂದ್ರಾಪುರ, ಅಲಗೇರಿ ಮಂಡ್ರಿ, ನಿಟ್ಟೂರು, ನೆವಟೂರು, ಯಡೂರು, ನಗರ ಹಾಗೂ ಬೇಳೂರಿನಲ್ಲಿ ಗಳಿವೆ. ಈ 10 ಆಸ್ಪತ್ರೆಗಳ ಪೈಕಿ ರಿಪ್ಪನ್‌ಪೇಟೆ, ಬೇಳೂರು ಹಾಗೂ ನೆವಟೂರು ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯರು ಲಭ್ಯವಿದ್ದಾರೆ. ಉಳಿದ 7 ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲದೆ ವರ್ಷಗಳೇ ಕಳೆದುಹೋಗಿವೆ. ತಾಲೂಕಿನ ಒಟ್ಟು 12 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ, ನಿಟ್ಟೂರು ಸಮೀಪದ ಹೆಬ್ಬಿಗೆಯಲ್ಲಿ ಸಿಬ್ಬಂದಿ ಇಲ್ಲದೆ ಚಿಕಿತ್ಸಾಕೇಂದ್ರ ಬಾಗಿಲು ತೆರೆಯದೇ ಎರಡು ವರ್ಷಗಳಾಗಿದೆ. ಕಾನುಗೋಡು, ಕೆ.ಬಿ. ಸರ್ಕಲ್, ಸಂಪೇಕಟ್ಟೆಯಲ್ಲಿಡಿ ದರ್ಜೆ ಸಿಬ್ಬಂದಿ ಇದ್ದರೂ ಬಾಗಿಲು ತೆರೆಯುವುದು ಅಪರೂಪವಾಗಿದೆ. ಉಳಿದ ಪ್ರಾಥಮಿಕ ಚಿಕಿತ್ಸಾ ಕೇದ್ರಗಳಲ್ಲೂ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಸೇವೆಗೆ ದೊರೆಯದ ಪಶು ಆಸ್ಪತ್ರೆ ಬಿದನೂರು ನಗರದ ಪಶು ಆಸ್ಪತ್ರೆಯ ಹಳೇ ಕಟ್ಟಡ ಸಂಪೂರ್ಣ ಶಿಥಿಲವಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದುವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ, ಸೇವೆಗೂ ಲಭ್ಯವಾಗಿಲ್ಲ. ನೂತನ ಕಟ್ಟಡ ಅತ್ಯಂತ ಕಳಪೆ ಕಾಮಗಾರಿ ಕಾರಣ, ವರ್ಷ ಕಳೆಯುವುದರೊಳಗೆ ಕಿಟಕಿ ಬಾಗಿಲು ಹಾಳಾಗಿವೆ. ನೀರಿನ ಪೈಪ್ ಲೈನ್ ವ್ಯವಸ್ಥೆ ಹದಗೆಟ್ಟಿದೆ. ಇದನ್ನು ಇಲಾಖೆ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ. ಜಾನುವಾರುಗಳ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಅಯಾ ಕಾಲದಲ್ಲಿ ಹಾಕಬೇಕಾದ ಎಫ್‌ಎಂಡಿ ವ್ಯಾಕ್ಸಿನ್‌ಗಳನ್ನು ಸಮಯಕ್ಕೆ ಸರಿಯಾಗಿ ಹಾಕಿಸಲಾಗದೆ ಜನ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. 2019ರಲ್ಲಿ ಹೊಸನಗರ ತಾಲೂಕು ಗಣತಿ
- ಹಸು- 1,01,523
- ಎಮ್ಮೆ- 19,377,
- ಕುರಿ-1139,
- ಮೇಕೆ-992,
- ಕೋಳಿ-2,83,425
from India & World News in Kannada | VK Polls https://ift.tt/3jE9cH8