ಆರ್. ತುಳಸಿಕುಮಾರ್ ಬೆಂಗಳೂರು ಬೆಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಆರ್ಡಬ್ಲ್ಯುಎಫ್ ಭಾರತೀಯ ರೈಲ್ವೆಗೆ ಹಾಗೂ ಅಚ್ಚು ಬಿಡಿ ಭಾಗಗಳನ್ನು ಪೂರೈಸಿದ ಪ್ರಥಮ ಸಂಸ್ಥೆ. 1980ರಲ್ಲಿ ಕಾರ್ಖಾನೆಗೆ ಶಿಲಾನ್ಯಾಸ ನೆರವೇರಿತು. 1984ರಿಂದ ಉತ್ಪಾದನೆ ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗಿನ ನಾಲ್ಕು ದಶಕದ ಕಾಲಾವಧಿಯಲ್ಲಿ ಒಟ್ಟು 40 ಲಕ್ಷ ಗಾಲಿಗಳನ್ನು ಉತ್ಪಾದಿಸಿದೆ. ಈ ಅವಧಿಯಲ್ಲಿ ಭಾರತೀಯ ದೇಶಾದ್ಯಂತ ಓಡಿಸುತ್ತಿರುವ ರೈಲುಗಳಲ್ಲಿ ಯಲಹಂಕದ ಗಾಲಿಯ ಸಪ್ಪಳ ಕೇಳಬಹುದು. ರೈಲಿನ ಆಧಾರ ಸ್ತಂಭ ಗಾಲಿ ಹಾಗೂ ಅಚ್ಚು. ಇದರ ಮೇಲೆಯೇ ರೈಲುಗಳ ಓಡಾಟದ ಕ್ಷಮತೆ ಹೆಚ್ಚಿದೆ. ರೈಲು ಬೋಗಿಗಳ ದೀರ್ಘ ಬಳಕೆಗೆ ಗಾಲಿಗಳು ಬಲ ನೀಡುತ್ತವೆ. ಇಂತಹ ಶಕ್ತಿಶಾಲಿ ಹಾಗೂ ಹೆಚ್ಚು ಸಾಮರ್ಥ್ಯದ ಗಾಲಿಗಳನ್ನು ಆರ್ಡಬ್ಲ್ಯುಎಫ್ ನಿರಂತರವಾಗಿ ಉತ್ಪಾದಿಸುವಲ್ಲಿ ನಿರತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಗಾಲಿ ಉತ್ಪಾದನೆ 1.75 ಲಕ್ಷ ದಾಟಿದೆ. ಪ್ರಸಕ್ತ ಸಾಲಿನ ಆರಂಭದಲ್ಲಿ ಕೋವಿಡ್-19ರ ಕಾರಣ ಏಪ್ರಿಲ್ ಬದಲು ಮೇ ತಿಂಗಳಿನಿಂದ ಉತ್ಪಾದನೆಯನ್ನು ಆರಂಭಿಸಿದೆ. ಹಲವು ಜಾಗೃತಿ ಕಾರ್ಯಕ್ರಮ ಹಾಗೂ ಸುರಕ್ಷತೆ ನಿಯಮ ಪಾಲಿಸಿ ಉತ್ಪಾದನೆಯನ್ನು ಮುಂದುವರಿಸಿ ರೈಲ್ವೆ ಇಲಾಖೆಗೆ ಬೆನ್ನೆಲುಬಾಗಿ ನಿಂತಿದೆ. ಗಾಲಿಗಳ ಉತ್ಪಾದನೆಯಂತೆ ಅಚ್ಚು(ಆ್ಯಕ್ಸಲ್) ತಯಾರಿಕೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಈವರೆಗೆ ಒಟ್ಟು 19.61 ಲಕ್ಷ ಅಚ್ಚು ಹಾಗೂ 13.30 ಲಕ್ಷ ವೀಲ್ ಸೆಟ್ ತಯಾರಿಸಿದೆ. ದೂರದ ಮಾರ್ಗಗಳಿಗೆ ಶಕ್ತಿಶಾಲಿ ಗಾಲಿಗಳ ಅಗತ್ಯದಿಂದಾಗಿ ಈಗ ವೀಲ್ ಸೆಟ್ಗೆ ಬೇಡಿಕೆ ಬರುತ್ತಿದೆ ಎಂದು ಕಾರ್ಖಾನೆಯ ಅಧಿಕಾರಿಗಳು ತಿಳಿಸಿದ್ದಾರೆ. ರಫ್ತಿನತ್ತ ಗಮನ ಭಾರತೀಯ ರೈಲ್ವೆಗೆ ಅಗತ್ಯವಿರುವಷ್ಟು ಗಾಲಿ ಹಾಗೂ ಅಚ್ಚು ಬಿಡಿ ಭಾಗಗಳನ್ನು ಪೂರೈಸುವ ಸಾಮರ್ಥ್ಯವನ್ನು ಕಾರ್ಖಾನೆಯು ಹೊಂದಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕಾರಣ ಜಾಗತಿಕ ಮಾರುಕಟ್ಟೆಯತ್ತ ಚಿತ್ತ ಹರಿಸಲಾಗಿದೆ. ಇತ್ತೀಚೆಗೆ ಮೊಜಾಂಬಿಕ್ ದೇಶಕ್ಕೆ ಲೊಕೋಮೋಟಿವ್ ರೈಲುಗಳಿಗೆ ಅಗತ್ಯವಿರುವ ವೀಲ್ ಸೆಟ್ ಪೂರೈಸಿದೆ. ಇದೂ ಸೇರಿದಂತೆ ಒಟ್ಟು 8.13 ಕೋಟಿ ರೂ. ಮೊತ್ತದ ಆರ್ಡರ್ ಪಡೆದಿದೆ. ಮುಂದಿನ ದಿನಗಳಲ್ಲಿ ಆಫ್ರಿಕನ್ ದೇಶಗಳೂ ಸೇರಿದಂತೆ ಇತರ ರಾಷ್ಟ್ರಗಳಿಗೆ ರಫ್ತು ಬೇಡಿಕೆಯನ್ನು ಪಡೆಯುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಭಾರತೀಯ ರೈಲ್ವೆಗೆ ಬೇಕಿರುವಷ್ಟು ಗುಣಮಟ್ಟದ ಗಾಲಿ, ಅಚ್ಚು ಹಾಗೂ ವೀಲ್ ಸೆಟ್ ಪೂರೈಸುವಲ್ಲಿ ಕಾರ್ಖಾನೆ ನಿರತವಾಗಿದೆ. ಹೊಸ ತಂತ್ರಜ್ಞಾನ ಅಳವಡಿಕೆ, ಅಧಿಕಾರಿ-ಸಿಬ್ಬಂದಿಗಳ ಸಹಕಾರದಿಂದ ಉತ್ಪಾದನೆ ಪ್ರಮಾಣ ಏರಿಕೆಯಾಗಿದೆ. ಉತ್ಪಾದನೆ ಸ್ಥಳದಲ್ಲಿ ಗರಿಷ್ಠ ಸುರಕ್ಷತೆಗೆ ಗಮನ ಹರಿಸಲಾಗಿದೆ. ಜಿತೇಂದ್ರ ಹಾರಲ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಆರ್ಡಬ್ಲ್ಯುಎಫ್ ಮುಖ್ಯಾಂಶಗಳು
- ಒಂದೇ ಸೂರಿನಡಿ ಮೂರು ಉತ್ಪನ್ನಗಳ ತಯಾರು
- ವೀಲ್ ಸೆಟ್ ಉತ್ಪಾದನೆ ಪ್ರಮಾಣ ಕೂಡ ಹೆಚ್ಚಳ
- ಸ್ವಾವಲಂಬನೆ ಬಳಿಕ ರಫ್ತಿನತ್ತ ಚಿತ್ತ ಹರಿಸಿದ ಕಾರ್ಖಾನೆ
- 2015-16 1,83,001 77,410
- 2016-17 1,30,033 74,444
- 2017-18 1,21,121 72,027
- 2018-19 1,31,131 71,001
- 2019-20 1,76,387 80,849
- 2020-21* 72,173 37,89
from India & World News in Kannada | VK Polls https://ift.tt/3e4vxMM