ಸಾರಿಗೆ ನೌಕರರ ವೇತನಕ್ಕೆ ನೆರವು ನೀಡಿ: ಸಿಎಂಗೆ ಲಕ್ಷ್ಮಣ ಸವದಿ ಮನವಿ

ಸವದತ್ತಿ (ಬೆಳಗಾವಿ): "ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಹೀಗಾಗಿ ಮುಂದಿನ ಜನವರಿ ವರೆಗೆ ನೌಕರರ ಸಂಬಳಕ್ಕೆ ಅನುಕೂಲ ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ," ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಹೇಳಿದರು. ಮಂಗಳವಾರ ಪಟ್ಟಣದಲ್ಲಿ ಹೈಟೆಕ್‌ ಬಸ್‌ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, "ಸಾರಿಗೆ ಸಂಸ್ಥೆ ಇಂದು 3 ಸಾವಿರ ಕೋಟಿ ರೂ.ನಷ್ಟು ವಿದ್ಯಾರ್ಥಿಗಳ ಬಸ್‌ಪಾಸ್‌ಗೆ ಖರ್ಚು ಮಾಡುತ್ತಿದೆ. ಸಾರಿಗೆ ಸಂಸ್ಥೆಯಿಂದ ನೀಡುವ ಬಸ್‌ ಪಾಸ್‌ ಸೌಲಭ್ಯಕ್ಕೆ 2,960 ಕೋಟಿ ರೂ.ಗಳನ್ನು ಸರಕಾರ ಸಾರಿಗೆ ಸಂಸ್ಥೆಗೆ ನೀಡಿದರೆ ನಷ್ಟ ಸ್ವಲ್ಪ ಮಟ್ಟಿಗೆ ಸರಿದೂಗಿದಂತಾಗುತ್ತದೆ," ಎಂದರು. ಲಾಕ್‌ಡೌನ್‌ನ ಸಂದರ್ಭದಲ್ಲಿ ಆರು ತಿಂಗಳು ನೌಕರರ ಸಂಬಳವನ್ನು ಸರಕಾರವೇ ನೀಡಿದೆ. ಇನ್ನೂ ನೆರವು ಮುಂದುವರಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ಸವದಿ ತಿಳಿಸಿದರು. "ಪ್ರಾಯೋಗಿಕವಾಗಿ ಬೆಂಗಳೂರಲ್ಲಿ 300 ಮತ್ತು ಹುಬ್ಬಳ್ಳಿಯಲ್ಲಿ 50 ಇಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ತಯಾರಿ ನಡೆಸಲಾಗುತ್ತಿದೆ’’ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.


from India & World News in Kannada | VK Polls https://ift.tt/3mzVTtn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...