ಇಂದು ವಿಶ್ವ ಸೋರಿಯಸಿಸ್‌ ದಿನ: ಚರ್ಮ ರೋಗದ ಬಗ್ಗೆ ತಿಳಿಯಲೇ ಬೇಕಾದ ಸಂಗತಿಗಳಿವು!

ಕಾಯಿಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಅನುವಂಶಿಕ, ಮಾನಸಿಕ ಒತ್ತಡಗಳು, ಅಲರ್ಜಿಗಳು, ಸೋಂಕುಗಳು, ಹವಾಮಾನದ ವೈಪರೀತ್ಯಗಳು ಮತ್ತು ಕೆಲವು ಔಷಧಿಗಳು ಈ ಕಾಯಿಲೆಯನ್ನು ಪ್ರಚೋದಿಸುತ್ತವೆ. ಉಲ್ಬಣವಾಗುವುದು ಹಾಗೂ ಹಿನ್ನಡೆಯುವುದು ಸಾಮಾನ್ಯವಾಗಿರುವ ಈ ಕಾಯಿಲೆಯು ಅಲ್ಲಲ್ಲಿ ಕೆಲವು ಕುಟುಂಬಗಳಲ್ಲೂ ಗೋಚರವಾಗುತ್ತದೆ. ಆದರೆ ಇದು ಅಂಟು ಕಾಯಿಲೆಯಲ್ಲ. ಈ ರೋಗದಲ್ಲಿ ಚರ್ಮದ ಮೇಲೆ ಅಲ್ಲಲ್ಲಿ ನಿರ್ದಿಷ್ಟ ಅಂಚು ಹೊಂದಿದ, ಕೆಂಪು ಕಲೆಗಳ ಮೇಲೆ ಬೆಳ್ಳಿಯಂತಹ ದಪ್ಪ ಚಕ್ಕೆಗಳು ಶೇಖರಣೆಯಾಗಿ ಉಬ್ಬಿದಂತೆ ಕಾಣುತ್ತವೆ. ಅಪರೂಪವಾಗಿ ತುರಿಕೆ ಕಂಡು ಬರಬಹುದು. ಈ ಮಚ್ಚೆಗಳು ಹಲವು ಮಿ.ಮೀ. ಗಳಿಂದ ಕೆಲವು ಸೆಂ.ಮೀ ಗಳವರೆಗೂ ಹರಡಬಹುದಾಗಿದ್ದು, ಕೆಲವರಲ್ಲಿ ಒಂದೆರಡು ಮಾತ್ರವಿದ್ದು ಮತ್ತೆ ಕೆಲವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಈ ರೀತಿಯ ಮಚ್ಚೆಗಳು ದೇಹದ ಯಾವುದೇ ಭಾಗದಲ್ಲಿ ಬರಬಹುದಾದರೂ, ತಲೆ, ಮಂಡಿ, ಮೊಳಕೈ ಮತ್ತು ಬೆನ್ನಿನ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ಕೆಲವು ರೋಗ ಪೀಡಿತರಲ್ಲಿ, ಉಗುರುಗಳೂ ಈ ರೋಗಕ್ಕೆ ತುತ್ತಾಗಿ ಉಗುರುಗಳು ದಪ್ಪವಾಗಿ, ಬಣ್ಣ ಮಾಸಬಹುದು ಅಥವಾ ಕಂದು/ಕಪ್ಪು ಬಣ್ಣಕ್ಕೆ ತಿರುಗಬಹುದು. ಉಗುರಿನ ಮೇಲ್ಮೈ ನಲ್ಲಿ ಸಣ್ಣ ಸಣ್ಣ ತಗ್ಗುಗಳು ಕಾಣಿಸಿಕೊಳ್ಳಬಹುದು. ಚಿಕಿತ್ಸೆಸೋರಿಯಾಸಿಸ್‌ ಕಾಯಿಲೆಗೆ ಸ್ಪಷ್ಟ ಹಾಗೂ ಖಚಿತ ಔಷಧ ಲಭ್ಯವಿರುವುದಿಲ್ಲ. ಆದರೆ ಲಭ್ಯವಿರುವ ಔಷಧಗಳಿಂದ ಕಾಯಿಲೆಯನ್ನು ಸಂಪೂರ್ಣ ಹತೋಟಿಯಲ್ಲಿಡಲು ಸಾಧ್ಯವಿದೆ. ಚರ್ಮದ ಮೇಲಿನ ಹುರುಪಿಗೆ ಸಾಮಾನ್ಯವಾಗಿ ದೊರೆಯುವ ಕೊಬ್ಬರಿ ಎಣ್ಣೆ ಅಥವಾ ಇತರೆ ಸೂಕ್ತ ಎಣ್ಣೆಗಳನ್ನು ಸವರಿದರೆ ತಾತ್ಕಾಲಿಕ ಉಪಶಮನ ಸಿಗುತ್ತದೆ. ಸೋರಿಯಾಸಿಸ್‌ ಕಾಯಿಲೆಯ ಕೆಲವೇ ಮಚ್ಚೆಗಳಿದ್ದರೆ ಅಥವಾ ಸೀಮಿತ ಪ್ರದೇಶವನ್ನಷ್ಟೇ ಆಕ್ರಮಿಸಿದಾಗ ಸ್ಮೀರಾಯ್ಡ್‌ ಮುಲಾಮನ್ನು ದಿನಕ್ಕೆರಡು ಬಾರಿಯಂತೆ ಹಚ್ಚಬೇಕು. ಟಾರೆಣ್ಣೆ, ಡೈತ್ರನಾಲ್‌ ಮುಲಾಮು, ಸ್ಯಾಲಿಸಿಲಿಕ್‌ ಆಮ್ಲದ ಮುಲಾಮುಗಳನ್ನು ಕೂಡ ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಕಾಯಿಲೆ ತೀವ್ರವಾಗಿದ್ದಾಗ, ಅಥವಾ ಚರ್ಮದ ವಿಸ್ತ್ರತ ಪ್ರದೇಶವನ್ನು ಆವರಿಸಿದಾಗ ಪೂರ್ವ ಚಿಕಿತ್ಸೆ, ಮಾತ್ರೆಗಳನ್ನು ನೀಡಬಹುದು. ತೀವ್ರತರವಾದ ಕಾಯಿಲೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಾತ್ರೆ ಸೇವಿಸಬೇಕು. ತಿಳಿಯಲೇ ಬೇಕಾದ ಸಂಗತಿಗಳಿವು...
  • ಸೋರಿಯಾಸಿಸ್‌ ಅಂಟು ಕಾಯಿಲೆ ಅಲ್ಲ. ಆದುದರಿಂದ ಇವರನ್ನು ತಾತ್ಸಾರ ಮಾಡಬೇಡಿ ಅಥವಾ ದೂರವಿಡಬೇಡಿ.
  • ಸೋರಿಯಾಸಿಸ್‌ ಕಾಯಿಲೆ ರೋಗಿಯಿಂದ ಮಕ್ಕಳಿಗೆ ಅನುವಂಶಿಕವಾಗಿ ಹರಡುವ ಸಾಧ್ಯತೆ ತುಂಬಾ ಕಡಿಮೆ
  • ರೋಗಿಗಳಿಗೆ ಯಾವುದೇ ಆಹಾರದ ಪಥ್ಯ ಬೇಕಾಗಿಲ್ಲ. ಆದರೆ ಸಿಪ್ಪೆಗಳ ಮೂಲಕ ಪ್ರೋಟೀನ್‌ಗಳು ಕಳೆದು ಹೋಗುವುದರಿಂದ ಸಮತೋಲನವಾದ ಆಹಾರದ ಅಗತ್ಯ
  • ಸೋರಿಯಾಸಿಸ್‌ ಕಾಯಿಲೆಯಿಂದ ಕ್ಯಾನ್ಸರ್‌ ಬರುವುದಿಲ್ಲ.
  • ಸೋರಿಯಾಸಿಸ್‌ ಪೀಡಿತರು ಭಾವೋದ್ವೇಗಕ್ಕೆ ಒಳಗಾಗಬಾರದು. ಏಕೆಂದರೆ ಉದ್ವೇಗದಿಂದ ಕಾಯಿಲೆ ಉಲ್ಬಣಗೊಳ್ಳುತ್ತದೆ.
  • ಹಲವು ನಕಲಿ ವೈದ್ಯರು ಸೋರಿಯಾಸಿಸ್‌ ಪೀಡಿತರನ್ನು ಶೋಷಣೆ ಮಾಡುತ್ತಿದ್ದು, ಇಂತಹವರ ಬಗ್ಗೆ ಎಚ್ಚರಿಕೆ ವಹಿಸಬೇಕು.
ಸೋರಿಯಾಸಿಸ್‌ ಕಾಯಿಲೆಗೆ ಶಾಶ್ವತ ಪರಿಹಾರ ನೀಡುವ ಯಾವುದೇ ಔಷಧ ಪ್ರಪಂಚದ ಯಾವುದೇ ತರಹದ ವೈದ್ಯಕೀಯ ಕ್ಷೇತ್ರದಲ್ಲಿ ಈವರೆಗೆ ಕಂಡುಹಿಡಿದಿಲ್ಲ. ಹೀಗಾಗಿ ಈ ರೀತಿಯ ಉತ್ಪ್ರೇಕ್ಷೆಭರಿತ ಜಾಹೀರಾತುಗಳಿಗೆ ಯಾರೂ ಮೋಸ ಹೋಗಬಾರದು ಡಾ. ಬಿ.ಸಿ. ರವಿಕುಮಾರ್‌ ಎಂ.ಡಿ. ತಜ್ಞ


from India & World News in Kannada | VK Polls https://ift.tt/3kFh78i

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...