ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ 7 ದಿನದಲ್ಲಿ 3.63 ಕೋಟಿ ರೂ.‌ ದಂಡ ವಸೂಲಿ!

ಬೆಂಗಳೂರು: ನಗರದ ಗಲ್ಲಿ ಗಲ್ಲಿಗಳಲ್ಲಿ ಸಂಚಾರ ಪೊಲೀಸರು ನಿಂತು ವಾಹನ ಸವಾರರ ದಾಖಲೆ ತಪಾಸಣೆ ಮಾಡುವುದರ ಜತೆಗೆ ನಿಯಮ ಉಲ್ಲಂಘಿಸುತ್ತಿರುವವರಿಂದ ವಸೂಲಿ ಮಾಡುತ್ತಿದ್ದಾರೆ. ಅ.19 ರಿಂದ 25ರವರೆಗೆ ಕೇವಲ ಏಳು ದಿನದಲ್ಲಿ 86,380 ಪ್ರಕರಣ ದಾಖಲಿಸಿದ್ದು, ಕೇವಲ ಏಳು ದಿನದಲ್ಲಿ ಒಟ್ಟು 3.63 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದ್ದರೂ ಟ್ರಾಫಿಕ್‌ ನಿಯಮ ಉಲ್ಲಂಘನೆ ಮುಂದುವರಿದಿದೆ. ಇದರಲ್ಲಿ ನೋ ಪಾರ್ಕಿಂಗ್‌, ಸಿಗ್ನಲ್‌ ಜಂಪ್‌ ಹಾಗೂ ಹೆಲ್ಮೆಟ್‌ ಧರಿಸದೆ ಸಂಚರಿಸುವ ಕೇಸುಗಳ ಸಂಖ್ಯೆ ಹೆಚ್ಚಿದೆ. ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ. ಪೊಲೀಸರಿಲ್ಲ ಎಂದು ನಿಯಮ ಉಲ್ಲಂಘಿಸುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಇದರಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿರುವ ಬಗ್ಗೆ 28,201 ಪ್ರಕರಣ ದಾಖಲಾಗಿದ್ದು, 1.02 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರ ಹೆಲ್ಮೆಟ್‌ ಧರಿಸದಿರುವ ಬಗ್ಗೆ 17,105 ಪ್ರಕರಣಗಳು ದಾಖಲಾಗಿದ್ದು, 62.38 ಲಕ್ಷ ರೂ. ಸಂಗ್ರಹವಾಗಿದೆ. ಕಾರುಗಳಲ್ಲಿ ಸೀಟ್‌ ಬೆಲ್ಟ್‌ ಧರಿಸದ 4,827 ಪ್ರಕರಣಗಳು ದಾಖಲಾಗಿದ್ದು, 22.92 ಲಕ್ಷ ರೂ. ದಂಡ ಸಂಗ್ರಹ ಹಾಗೂ ನಿಷೇಧಿತ ರಸ್ತೆಗಳಲ್ಲಿ ಸಂಚಾರ ಮಾಡಿರುವ 3,790 ಪ್ರಕರಣಗಳಿಂದ 14.45 ಲಕ್ಷ ರೂ. ಮತ್ತು ಸಂಚಾರ ಸಮಯದಲ್ಲಿ ಮೊಬೈಲ್‌ ಬಳಕೆ ಮಾಡಿರುವ 2,448 ಪ್ರಕರಣಗಳಿಂದ 16.83 ಲಕ್ಷ ರೂ. ಸಂಗ್ರಹಿಸಲಾಗಿದೆ. ದೋಷಪೂರಿತ ನಂಬರ್‌ ಪ್ಲೇಟ್‌ ಹಾಗೂ ತ್ರಿಬಲ್‌ ರೈಡಿಂಗ್‌, ನೋ ಪಾರ್ಕಿಂಗ್‌, ಓವರ್‌ ಸ್ಪೀಡ್‌, ಉದ್ದದ ವಸ್ತುಗಳ ಸಾಗಟ ಸೇರಿದಂತೆ ನಾನಾ ರೀತಿಯ ಸಂಚಾರ ನಿಯಮ ಉಲ್ಲಂಘಿಸಿರುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸಲಾಗಿದೆ ಎಂದು ನಗರ ಸಂಚಾರ ಪೊಲೀಸ್‌ ಇಲಾಖೆ ತಿಳಿಸಿದೆ.


from India & World News in Kannada | VK Polls https://ift.tt/2J4JBdM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...