ಬೇಡಿಕೆ ಕಳೆದುಕೊಂಡ ಅಡಿಕೆ ಸಸಿ: ದೊಡ್ಡಬಳ್ಳಾಪುರದಲ್ಲಿ ಮಾರಾಟವಾಗದೇ ಉಳಿದ 2 ಲಕ್ಷ ಗಿಡ!

ಮನು ಕುಮಾರ್‌ ಎಚ್‌ ಕೆ. ಗ್ರಾಮಾಂತರ ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಹೆಜ್ಜಾಜ್ಜಿ, ಕತ್ತಾಳೆ ಪಾಳ್ಯ, ಹಾದ್ರೀಪುರ ಗ್ರಾಮಗಳಲ್ಲಿಬೆಳೆದಿದ್ದ ಸಸಿಗಳು ಬೇಡಿಕೆಯಿಲ್ಲದೇ ಪಾತಿಗಳಲ್ಲೇ ಒಣಗುತ್ತಿದೆ. ಹಿಂದೆಲ್ಲಾ ತಮ್ಮ ತೋಟಗಳಲ್ಲಿ ಬೀಜದ ಆಯ್ಕೆ ಮಾಡಿ, ಸಸಿ ಬೆಳೆಸುತ್ತಿದ್ದರು. ಆದರೆ ಇತ್ತೀಚೆಗೆ ಕೂಲಿ ಆಳುಗಳ ಕೊರತೆ, ಮತ್ತಿತ್ತರ ಕಾರಣಗಳಿಂದ ಸಸಿಗಳನ್ಮು ಬೆಳೆಸುವುದು ಕಷ್ಟವಾಗಿದೆ. ನಾನಾ ಕಾರಣಗಳಿಂದ ಸತ್ತ ಹತ್ತಾರು ಸಸಿಗಳನ್ನು ನೆಡುವುದಕ್ಕಾಗಿ ನೂರಾರು ಸಸಿಗಳನ್ನು ಬೆಳೆಸುವುದರ ಬದಲು ಕೊಂಡು ತಂದರಾಯಿತು ಎಂಬ ಮನೋಭಾವದಲ್ಲಿ ಕೃಷಿಕರು ಇದ್ದರು. ಆದರೆ, ಈ ವರ್ಷ ಏಕೋ ಏನೋ ಕೃಷಿಕರು ಅಡಿಕೆ ಮೇಲಿನ ಆಸಕ್ತಿ ಕಳೆದುಕೊಂಡಂತಿದೆ. ಫಾರಂಗಳಲ್ಲಿ ಸಸಿಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಬೆಲೆ ಇಳಿಕೆ ಸಸಿಗಳನ್ನು ಬೆಳೆಸಲು ಯಾವುದೇ ಕ್ರಿಮಿ ನಾಶಕಗಳನ್ನು ಬಳಸದೆ ಹಸು ಗೊಬ್ಬರ, ಕುರಿ ಮೇಕೆ ಗೊಬ್ಬರ ಹಾಗೂ ಕೆಲ ಸಸಿಗಳನ್ನು ಕೊಳೆಸಿ ಗೊಬ್ಬರ ತಯಾರಿಸಿ ಮಾಡುತ್ತಿದ್ದರು. ಇಂತಹ ಸಸಿಗಳಿಗೆ ಬಾರೀ ಬೇಡಿಕೆ ಇತ್ತು. ಹೆಚ್ಚಾಗಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ರೈತರು ಇಲ್ಲಿಗೆ ಬಂದು ಸಸಿಗಳನ್ನು ಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಒಂದು ವರ್ಷದ ಗಿಡಗಳಿಗೆ ಮೊದಲು 50 ರಿಂದ 60 ರೂ. ವರೆಗೂ ಮಾರಾಟ ಮಾಡುತ್ತಿದ್ದರು. ಆದರೆ ಈಗ 10 ರೂಪಾಯಿಗೂ ಕೇಳೊರು ಇಲ್ಲದಂತಾಗಿದೆ. ಸಸಿ ಬೆಳೆಸಲು ಮಾಡಿದ ಖರ್ಚು ಸಹ ದೊರೆಯದೆ ನಷ್ಟ ಅನುಭವಿಸುವಂತಾಗಿದೆ. ಈ ವರ್ಷ ಗಾಳಿ ಮಳೆಗೆ ಕೆಲ ಭಾಗದಲ್ಲಿ ಮರ ಮುರಿದಿವೆ. ಈ ಜಾಗಕ್ಕೆ ಕೆಲವರು ಹೊಸ ಸಸಿಗಳನ್ನು ನೆಡಲು ಮುಂದಾಗಿದ್ದಾರೆ. ಇನ್ನೂ ಕೆಲವರೂ ಗಿಡ ನೆಡದೆ ಹಾಗೆ ಬಿಟ್ಟಿದ್ದಾರೆ. ರೈತರ ನಿರುತ್ಸಾಹವೂ ಸಸಿಗಳು ಮಾರಾಟ ಆಗದೆ ಉಳಿಯಲು ಕಾರಣವಾಗಿದೆ. ನಾವು ಪ್ರತಿ ವರ್ಷ ನಮ್ಮ ತೋಟದಲ್ಲಿ ನಾಟಿ ಅಡಿಕೆ ಸಸಿಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದೆವು. ಈ ವರ್ಷ ಯಾರೂ ಕೊಳ್ಳೋರು ಇಲ್ಲದೆ ತೋಟದಲ್ಲಿಯೇ ಉಳಿದಿದೆ. ಅವುಗಳನ್ನು ನೆಟ್ಟು ಪೋಷಿಸಲು ನಮ್ಮ ಬಳಿ ಜಾಗವಿಲ್ಲ. ನಮ್ಮ ಗ್ರಾಮದಲ್ಲಿ ಸುಮಾರು ಲಕ್ಷ ಲಕ್ಷ ಸಸಿ ಮಾರಾಟವಾಗದೇ ಉಳಿದಿವೆ. ರೈತರಿಗೆ ಉಚಿತವಾಗಿ ನೀಡುತ್ತೇವೆ ಎಂದರೂ, ಯಾರೂ ತೆಗೆದುಕೊಳ್ಳೋರು ಇಲ್ಲದಂತಾಗಿದೆ. ಓಬಳಯ್ಯ. ರೈತ. ಚಿಕ್ಕಹೆಜ್ಜಾಜ್ಜಿ


from India & World News in Kannada | VK Polls https://ift.tt/2TtvpNy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...