ಬೆಂಗಳೂರು ವಿವಿ ಕುಲಪತಿ ಆಯ್ಕೆ: ಪಿ.ಎಸ್‌.ಯಡಪಡಿತ್ತಾಯ ನೇತೃತ್ವದಲ್ಲಿ ಸರ್ಚ್ ಕಮಿಟಿ

ಮಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಕುಲಪತಿ ಆಯ್ಕೆಗೆ ಮಂಗಳೂರು ವಿವಿ ಕುಲಪತಿ ನೇತೃತ್ವದ ಮೂರು ಮಂದಿ ಸದಸ್ಯರ ಸರ್ಚ್ ಕಮಿಟಿಯನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ವಿವಿ ಹಾಲಿ ಕುಲಪತಿ ಪ್ರೊ.ಜಾಫೆಟ್‌ ಅವರ ಅಧಿಕಾರ ಅವಧಿ ನ.23ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮೊದಲು ನೂತನ ಕುಲಪತಿಗಳ ಆಯ್ಕೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಚ್ ಕಮಿಟಿಯನ್ನು ನೇಮಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಅಧ್ಯಕ್ಷತೆಯ ಈ ಸರ್ಚ್ ಕಮಿಟಿಯಲ್ಲಿ ಮೈಸೂರು ಮುಕ್ತ ವಿವಿ ಕುಲಪತಿ ಡಾ.ವಿದ್ಯಾಶಂಕರ್‌, ಹೊಸದಿಲ್ಲಿಯ ಜೆಎನ್‌ಯು ಕುಲಪತಿ ಪ್ರೊ.ಜಗದೀಶ್‌ ಕುಮಾರ್‌, ಕುಲಬುರಗಿಯ ಕರ್ನಾಟಕ ಸೆಂಟ್ರಲ್‌ ವಿವಿ ಕುಲಪತಿ ಪ್ರೊ.ಎನ್‌.ಆರ್‌.ಶೆಟ್ಟಿ ಅವರನ್ನು ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಬೆಂಗಳೂರು ನಗರ ವಿವಿ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶವಿದ್ದು, ಬಳಿಕ ನೂತನ ಕುಲಪತಿಯ ಆಯ್ಕೆಗೆ ಸಭೆ ನಡೆಸಿ ಶಿಫಾರಸು ಮಾಡಲಾಗಿದೆ.


from India & World News in Kannada | VK Polls https://ift.tt/2HM5sGI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...