ವಾಟರ್ ಬಾಯ್ ಆದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಕ್ರೀಡಾಸ್ಫೂರ್ತಿಗೆ ಹ್ಯಾಟ್ಸ್ ಆಫ್!

ಮೌಂಟ್‌ ಮಾಂಗ್ನುಯಿ: ನ್ಯೂಜಿಲೆಂಡ್ ವಿರುದ್ದ ನಡೆದ ಅಂತಿಮ ಟಿ20 ಪಂದ್ಯದಲ್ಲೂ ಭಾರತ ಏಳು ರನ್‌ಗಳ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್‌ಗೈದಿದೆ. ಇದರೊಂದಿಗೆ ಟಿ20 ಸರಣಿಯಲ್ಲಿ 5-0 ಅಂತರದ ಗೆಲುವು ದಾಖಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಭಾಜನವಾಗಿದೆ. ಈ ಮಧ್ಯೆ ಅಂತಿಮ ಪಂದ್ಯದಿಂದ ಹೊರಗುಳಿದಿರುವ ಇತ್ತಂಡಗಳ ನಾಯಕರಾದ ಹಾಗೂ , ವಾಟರ್ ಬಾಯ್ ಆಗುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದಾರೆ. ಮೂರನೇ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯವಾಗಿದ್ದರು. ಇನ್ನೊಂದೆಡೆ ಆಗಲೇ ಸರಣಿ ಗೆದ್ದ ಖುಷಿಯಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಡುವಿಲ್ಲದ ವೇಳಾಪಟ್ಟಿ ಹಿನ್ನೆಲೆಯಲ್ಲಿ ಅಂತಿಮ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ತೆಗೆದುಕೊಂಡಿದ್ದರು. ಈ ನಡುವೆ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಆಟಗಾರರಿಗೆ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗುವ ಮೂಲಕ ಗಮನ ಸೆಳೆದರು. ಮೈದಾನದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದರ ಜೊತೆಗೆ ಮೈದಾನದ ಹೊರಗಡೆ ಅತ್ಯುತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್, ಬೌಂಡರಿ ಲೈನ್ ಹೊರಗಡೆ ಜೊತೆಯಾಗಿ ಕುಳಿತುಕೊಳ್ಳುವ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಯುವ ಆಟಗಾರ ರಿಷಬ್ ಪಂತ್ ಜೊತೆಗಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಪಾಲಿಗಂತೂ ಅತ್ಯಂತ ರೋಚಕ ಕ್ಷಣವಾಗಿ ಪರಿಣಮಿಸಿದೆ. ಪ್ರಸ್ತುತ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡುತ್ತಿದೆ. ಏತನ್ಮಧ್ಯೆ ಹೀನಾಯ ಸೋಲಿನ ಹೊರತಾಗಿಯೂ ನ್ಯೂಜಿಲೆಂಡ್ ನಾಯಕನ ಬಗ್ಗೆ ಟೀಮ್ ಇಂಡಿಯಾ ಕಪ್ತಾನ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೇನ್ ಶ್ರೇಷ್ಠ ಆಟಗಾರನಾಗಿದ್ದು, ನಾವಿಬ್ಬರೂ ಸಮಾನ ಮನೋಸ್ಥಿತಿಯನ್ನು ಹೊಂದಿದ್ದೇವೆ. ಜಗತ್ತಿನ ವಿವಿಧ ಕೋನಗಳಿಂದ ಬಂದಿದ್ದರೂ ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿರುವುದು ನಿಜಕ್ಕೂ ಅಧ್ಭುತ ಎಂದರು. ನ್ಯೂಜಿಲೆಂಡ್ ಕ್ರಿಕೆಟ್ ಅತ್ಯುತ್ತಮ ಕೈಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಕೇನ್ ವಿಲಿಯಮ್ಸನ್ ಕಿವೀಸ್ ತಂಡವನ್ನು ಮುನ್ನಡೆಸಲು ಸರಿಯಾದ ವ್ಯಕ್ತಿಯಾಗಿದ್ದಾರೆ. ಭವಿಷ್ಯದಲ್ಲೂ ಈ ತಂಡವನ್ನು ಮುನ್ನಡೆಸಲು ಅವರಿಗೆ ನಾನು ಶುಭ ಹಾರೈಸುತ್ತೇನೆ. ಅವರ ವಿರುದ್ಧ ಆಡುವುದನ್ನು ಹಾಗೂ ನೋಡುವುದನ್ನು ಎಲ್ಲರೂ ಇಷ್ಟಪಡುತ್ತಾರೆ ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2tidgIW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...