ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಚಿದಂಬರಂ ಪತ್ನಿ!

ಹೊಸದಿಲ್ಲಿ: ಮಾಜಿ ವಿತ್ತ ಸಚಿವ ಅವರ ಇಡೀ ಕುಟುಂಬವೇ ಭಾರಿ ಹಗರಣಗಳ ಆರೋಪ ಎದುರಿಸುತ್ತಿದೆ. ಅಪ್ಪ-ಮಗ ಐಎನ್‌ಎಕ್ಸ್‌ ಮೀಡಿಯಾ ಮತ್ತು ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣದ ಆರೋಪ ಎದುರಿಸುತ್ತಿದ್ದರೆ, ಚಿದಂಬರಂ ಪತ್ನಿ ಶಾರಾದಾ ಚಿಟ್‌ ಫಂಡ್‌ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ. ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿ ಸುಮಾರು 1.4 ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪವನ್ನು ನಳಿನಿ ಚಿದಂಬರಂ ಹೊತ್ತಿದ್ದಾರೆ. ಶಾರದಾ ಗ್ರೂಪ್‌ನ ಮಾಲೀಕ ಸುದೀಪ್ತ ಸೇನ್‌ ಜತೆಗೂಡಿ ವಂಚನೆಯ ಸೂತ್ರಧಾರಿಗಳಾಗಿದ್ದಾರೆ ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಹೇಳಿದೆ. ಒಟ್ಟಾರೆ ಮಾಜಿ ಹಣಕಾಸು ಸಚಿವ ಚಿದಂಬರಂ ಹಾಗೂ ಅವರ ಕುಟುಂಬ ಭಾರಿ ಹಗರಣಗಳ ಆರೋಪ ಎದುರಿಸುತ್ತಿರುವುದು ವಿಪರ್ಯಾಸ. ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ತಪ್ಪೊಪ್ಪಿಗೆ ನೀಡಿ ಮಾಫಿ ಸಾಕ್ಷಿಯಾಗಿ ಬದಲಾದ ನಂತರ ಕೇಸ್‌ ಬಲವಾಗಿತ್ತು. ಇಂದ್ರಾಣಿ ಮುಖರ್ಜಿ ಅವರು ದಿಲ್ಲಿ ಕೋರ್ಟ್‌ನಲ್ಲಿ ತಪ್ಪೊಪ್ಪಿಗೆ ನೀಡಿದ್ದರು. ಇದರೊಂದಿಗೆ ಇಂದ್ರಾಣಿ, ಅವರ ಪತಿ ಪೀಟರ್‌ ಮುಖರ್ಜಿ, ಚಿದಂಬರಂ ಹಾಗೂ ಕಾರ್ತಿ ಚಿದಂಬರಂ ಹಗರಣದಲ್ಲಿ ಷಾಮೀಲಾಗಿರುವ ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿತ್ತು. 3 ಕೋಟಿ ರೂ. ಲಂಚ?: ವಿತ್ತ ಸಚಿವಾಲಯದ ವ್ಯಾಪ್ತಿಯಲ್ಲಿ­ರುವ ಬೋರ್ಡ್‌ನಲ್ಲಿ ಕಾರ್ತಿ ಗೋಲ್‌ಮಾಲ್‌ ಮಾಡಿ, ಐಎನ್‌ಎಕ್ಸ್‌ ಮೀಡಿಯಾಗೆ ತೆರಿಗೆ ವಂಚನೆಗೆ ಸಹಕರಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ 3 ಕೋಟಿ ರೂ. ಲಂಚ ಸಂದಾಯವಾಗಿತ್ತು ಎಂದು ಸಿಬಿಐ ಆರೋಪಿಸಿದೆ.


from India & World News in Kannada | VK Polls https://ift.tt/2TT08CY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...