ಹೊಸದಿಲ್ಲಿ: ತ್ರೇತಾಯುಗದ ಶ್ರೀ ರಾಮಚಂದ್ರ ಓಡಾಡಿದ ಪವಿತ್ರ ಸ್ಥಳಗಳಲ್ಲಿ ನೀವೂ ಹೆಜ್ಜೆ ಹಾಕಬೇಕೆ? ಹಾಗಿದ್ದರೆ ರಾಮಾಯಣ ಎಕ್ಸ್‌ಪ್ರೆಸ್ ರೈಲು ಹತ್ತಿ. ಸಂಚರಿಸಿದ್ದ ಎನ್ನಲಾದ ಎಲ್ಲಾ ಸ್ಥಳಗಳಿಗೂ ಈ ವಿಶೇಷ ರೈಲು ಸಂಚರಿಸಲಿದೆ. 800 ಮಂದಿ ಪ್ರಯಾಣಿಸಲು ಅವಕಾಶವಿರುವ ರೈಲಿಗೆ ನವೆಂಬರ್ 18ರಂದು ಚಾಲನೆ ದೊರೆಯಲಿದೆ. ದಿಲ್ಲಿಯಿಂದ ಆರಂಭಗೊಳ್ಳುವ ಈ ಯಾತ್ರೆ ಕರ್ನಾಟಕದ ಹಂಪಿಯನ್ನು ಪ್ರವೇಶಿಸಲಿದೆ. ರಾಮಜನ್ಮ ಭೂಮಿ ಅಯೋಧ್ಯೆ, ಹನುಮಾನ್ ಗಾರ್ಹಿ, ರಾಮಕೂಟ ಮತ್ತು ಕನಕ್ ಭವನ ದೇಗುಲಗಳಿಗೆ ಭೇಟಿ ನೀಡಲಿದೆ. ಅಲ್ಲಿಂದ ನಂದಿ ಗ್ರಾಮ, ಸೀತಾಮರ್ಹಿ, ಜನಕಪುರಿ, ವಾರಾಣಸಿ, ಪ್ರಯಾಗ, ಶೃಂಗವರಪುರ, ಚಿತ್ರಕೂಟ, ನಾಸಿಕ್, ಹಂಪಿ ಮತ್ತು ರಾಮೇಶ್ವರಗಳ ದರ್ಶನ ಸಿಗಲಿದೆ.
from India & World News in Kannada | VK Polls https://ift.tt/2LgKVrE